25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬೆಳ್ತಂಗಡಿ: ಕಳೆದ 7 ವರ್ಷಗಳಿಂದ ಚಿನ್ನ ಆಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡರವರು ನೇರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರಾದ ಆಶಾಲತ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಾಲು ಲಕ್ಷ್ಮಣ ಗೌಡ,ಜಯಾನಂದ ಲಾಯಿಲ,ಉದಯ ಲಾಯಿಲ,ವಸಂತಿ ಟಿ ನಿಡ್ಲೆ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಲಾಯಿಲ ದಯಾ ವಿಶೇಷ ಶಾಲೆಯ ದಿವ್ಯಾ ಅವರನ್ನು ಗೌರವಿಸಿ ಸನ್ಮಾನಿಸಿದರು.

ವಿವಿಧ ಹಬ್ಬಗಳಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿ, ಖರೀದಿಯ ಮೇಲೆ ಲಕ್ಕಿ ಕೂಪನ್ ಡ್ರಾ ಮಾಡಲಾಯಿತು‌.ಸಂಸ್ಥೆಯ ವ್ಯವಸ್ಥಾಪಕ ಅಶೋಕ್ ಬಂಗೇರ ಸ್ವಾಗತಿಸಿ, ಸಂಸ್ಥೆಯ ಬಗ್ಗೆ ವಿವರಿಸಿದರು. ಪೃಥ್ವಿ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

Related posts

ಕಳೆಂಜ ಅರಣ್ಯ ಇಲಾಖೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ: ಅಕ್ರಮ ಪ್ರವೇಶ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ: 11 ಜನರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮುಳಿಯ ಜ್ಯುವೆಲ್ಸ್‌ನಲ್ಲಿ ‘ಮುಳಿಯ ಚಿನ್ನೋತ್ಸವ’ ಪ್ರಾರಂಭ

Suddi Udaya

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ಅಳದಂಗಡಿ ಬಡಗಕಾರಂದೂರು ಪ್ರಗತಿ ಬಂಧು ಎ’ಬಿ ಒಕ್ಕೂಟದ ಅಧ್ಯಕ್ಷರುಗಳಾಗಿ ಹರೀಶ್ ಸಾಲಿಯನ್, ಕೃಷ್ಣಪ್ಪ ಪೂಜಾರಿ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಆಶಾ ಹರೀಶ್ ಆಯ್ಕೆ

Suddi Udaya

ಸ್ಟಾರ್ ವುಮನ್ ಪ್ರಶಸ್ತಿಗೆ ಬೆಳ್ತಂಗಡಿಯ ಫೌಝಿಯಾ ಆಯ್ಕೆ

Suddi Udaya

ಮರದಿಂದ ಬಿದ್ದು ಸಾವು

Suddi Udaya
error: Content is protected !!