29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂ.ಮಾ. ಶಾಲೆಯಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಆಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ ,ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ,ಗುಂಪು ಚಟುವಟಿಕೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


‌‌‌‌‌‌‌‌‌ ಈ ಪ್ರಯುಕ್ತ ಪೂಜ್ಯ ಖಾವಂದರ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ತಂಡದ ಯೋಜನಾಧಿಕಾರಿಯಾದ ಕಿಶೋರ್ ಕುಮಾರ್ ಎಂ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಧರ್ಮಸ್ಥಳ ಕ್ಷೇತ್ರ ಹಾಗೂ ಕುಟುಂಬದ ವಿಸ್ತಾರವಾದ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಅಲ್ಲದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಸೌಲಭ್ಯ ಗಳ ಮಾಹಿತಿಯನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಹೇಮಲತಾ ಎಂ ಆರ್ ರವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ನಿರೂಪಣೆ ಹಾಗೂ ಧನ್ಯವಾದ ವನ್ನು ಶಿಕ್ಷಕ ರಾದ ಶ್ರೇಯಾಂಸ ಜೈನ್ , ನೆರವೇರಿಸಿಕೊಟ್ಟರು

Related posts

ಬೆಳ್ತಂಗಡಿಯಲ್ಲಿ ಯುವವಾಹಿನಿಯಿಂದ “ಡೆನ್ನಾನ ಡೆನ್ನನ” ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ

Suddi Udaya

ದ ಕ.ಜಿಲ್ಲೆಗೆ ಸುವರ್ಣ ಕರ್ನಾಟಕ ರಥಯಾತ್ರೆ: ಉಜಿರೆಯಲ್ಲಿ ಸಂಭ್ರಮದ ಸ್ವಾಗತ

Suddi Udaya

ಬರೆಂಗಾಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಉಪಕೇಂದ್ರ ಆರಂಭ

Suddi Udaya

ಬೆಳ್ತಂಗಡಿ ರಾಮ ಭಕ್ತರಿಂದ ರಾಮೋತ್ಸವ ಸಂಭ್ರಮ: ಅಯೋಧ್ಯ ಕರ ಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆರವರಿಗೆ ಗೌರವಾರ್ಪಣೆ

Suddi Udaya

ಪ್ರಥಮ ತಾಲೂಕು ಅಧಿವೇಶನಕ್ಕೆ ಸಜ್ಜಾಗುತಿದೆ ಬೆಳ್ತಂಗಡಿ ಅಭಾಸಾಪ: ಡಿ.22 ರಂದು ಬಲಿಪ ರೆಸಾರ್ಟಿನಲ್ಲಿ ಅಧಿವೇಶನ

Suddi Udaya

ಲಾಯಿಲ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!