ಮೊಗ್ರು : ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ ಹೌಸ್ ನಲ್ಲಿ ಮೂರನೇ ವರ್ಷದ ಎರಡು ದಿನಗಳ ಜೇನು ಕೃಷಿ ಮಾಹಿತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆಯು ನ.23 ರಂದು ನೆರವೇರಿತು.
ಕಡಮ್ಮಾಜೆ ಫಾರ್ಮ್ಸ್ ನ ಶ್ರೀಮತಿ ಕುಸುಮಾವತಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಣಿಯೂರು ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಸಂದರ್ಬೋಚಿತವಾಗಿ ಮಾತನಾಡಿದರು. ಜೇನು ಕೃಷಿ ತರಬೇತುದಾರರಾದ ರಾಧಾಕೃಷ್ಣ ಕೋಡಿ ಹಾಗೂ ಬೆಳ್ತಂಗಡಿ ಚಿಂತನಾ ಹನಿ ಭೀ ಫಾರ್ಮ್ ನ ಅಶೋಕ್ ಕುಮಾರ್ ಜೀ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಬಂದಾರು ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ ಉಪಸ್ಥಿತರಿದ್ದರು. ಅರುಣಾ ದೇವಿಪ್ರಸಾದ್ ಮತ್ತು ಅಶ್ವಿನಿ ಜಯ ಪ್ರಸಾದ್ ಪ್ರಾರ್ಥನೆ ನೆರವೇರಿಸಿದರು, ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಜನರು ಜೇನು ಕೃಷಿಯ ಸಮರ್ಪಕ ಮಾಹಿತಿ ಪಡೆದುಕೊಂಡರು.