ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಸಂಚಾಲಕರಾದ ವಂ| ಫಾ| ಅಬೆಲ್ ಲೋಬೊ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಲೋಬೊ ಮೋಟಾರ್‍ಸ್‌ನ ಮಾಲಕ ರೋನಾಲ್ಡ್ ಲೋಬೊ ರವರು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು ಹಾಗೂ ಮಕ್ಕಳಿಂದ ನಡೆದ ಆಕರ್ಷಣೇಯ ಪಥ ಸಂಚಲನದಲ್ಲಿ ಗೌರವ ರಕ್ಷೆಯನ್ನು ಸ್ವೀಕರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಾರ್ಥನೆಯ ನಂತರ ಶಾಲಾ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ಸ್ವಾಗತಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾದ ರೋನಾಲ್ಡ್ ಲೋಬೊ ರವರನ್ನು ಸನ್ಮಾನಿಸಲಾಯಿತು ಹಾಗೂ ಅವರು ಕ್ರೀಡಾಕೂಟಕ್ಕೆ ಶುಭಾಶಯವನ್ನು ಕೋರಿದರು. ಸಮಾರಂಭದ ಅಧ್ಯಕ್ಷರಾದ ವಂ| ಫಾ| ಅಬೆಲ್ ಲೋಬೊ ರವರು ಅಧ್ಯಕ್ಷೀಯ ಭಾಷಣದ ಮೂಲಕ ಕ್ರೀಡಾಕೂಟಕ್ಕೆ ಶುಭಕೋರಿದರು.

ನಂತರ ಮಕ್ಕಳಿಂದ ಏರೋಬಿಕ್ ನೃತ್ಯ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಡಿ ಸೋಜ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಅನಿತಾ ಮೋನಿಸ್‌ರವರು ಉಪಸ್ಥಿತರಿದ್ದರು.
ಶ್ರೀಮತಿ ಐರಿನ್ ರೊಡ್ರಿಗಸ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಫಿಲೋಮಿನಾರವರು ಧನ್ಯವಾದವನ್ನಿತ್ತರು. ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳು ನೇರವೇರಲ್ಪಟ್ಟು ಸಮಾರೋಪ ಸಮಾರಂಭ ನಡೆದು ಕ್ರೀಡಾಕೂಟವು ಮುಕ್ತಾಯಗೊಂಡಿತು.