September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆಯಲ್ಲಿ ಡಾ. ಸವನ್ ರೈ ಬಾರ್ದಡ್ಕ ಬಳಂಜರವರ ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

ಗುರುವಾಯನಕೆರೆ: ಇಲ್ಲಿಯ ಹೊಟೇಲ್ ರೇಸ್ ಇನ್ ಜಂಕ್ಷನ್ ಹತ್ತಿರ ನೂತನವಾಗಿ ನಿರ್ಮಾಣವಾದ ಡಾ.ಸವನ್ ರೈ ಬಾರ್ದಡ್ಕ ಬಳಂಜ ಅವರ ಶ್ರೀ ಹಿತ ಡೆಂಟಲ್ ಝೋನ್ ಅ.11 ರಂದು ಶುಭಾರಂಭಗೊಂಡಿತು.

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ್ ಶೆಟ್ಟಿ ನೂತನ‌ ಡೆಂಟಲ್ ಕ್ಲಿನಿಕ್ ನ್ನು ಉದ್ಘಾಟಿಸಿ ಶುಭಕೋರಿದರು.

ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ,ಸಹಕಾರ ರತ್ನ ದಂಬೆಕಾನ ಸದಾಶಿವ ರೈ ದೀಪ ಪ್ರಜ್ವಲಿಸಿ ಶುಭಕೋರಿದರು‌.

ಈ ಸಂದರ್ಭದಲ್ಲಿ ವಾಣಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ನಾರಾಯಣ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಅಳದಂಗಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ,ಹರೀಶ್ ರೈ ಬಾರ್ದಡ್ಕ, ನಿವೃತ ಬ್ಯಾಂಕ್ ಉದ್ಯೋಗಿ ನಾರಾಯಣ್ ರೈ, ಬಳಂಜ ಬದಿನಡೆ ಕ್ಷೇತ್ರದ ಧರ್ಮದರ್ಶಿ ಜಯ ಸಾಲಿಯಾನ್, ಪ್ರಮುಖರಾದ ಸುರೇಶ್ ಶೆಟ್ಟಿ ಕುರೆಲ್ಯ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ವಸಂತ ಮಜಲು, ರಮಾನಾಥ ಶೆಟ್ಟಿ ಪಂಬಾಜೆ, ಎಜೆ ಆಸ್ಪತ್ರೆಯ ಡಾ.ಸೌರಾಬ್, ಹೆಚ್.ಪಿ ಕಂಪೆನಿ ಉದ್ಯೋಗಿ ತುಷಾರ್ ರೈ ಬೆಂಗಳೂರು, ದೇರಳಕಟ್ಟೆ ಆಸ್ಪತ್ರೆಯ ಸಾತ್ವಿಕ್ ರೈ, ಯೋಗೀಶ್ ಕುಮಾರ್ ನಡಕ್ಕರ, ನಾಗೇಶ್ ಕೋಟ್ಯಾನ್ ನಿಸರ್ಗ ಗುರುವಾಯನಕೆರೆ, ಕೃಷಿಕರಾದ ರಾಧಾಕೃಷ್ಣ ರೈ, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಹಂಕರ್ಜಾಲು, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ, ದೇಜಪ್ಪ ಪೂಜಾರಿ ಬಳಂಜ ,ಲೋಲಾಕ್ಷ ಶೆಟ್ಟಿ, ಹರೀಶ್ ವೈ ಚಂದ್ರಮ, ವೈಭವ್ ಸಂತೋಷ್ ಶೆಟ್ಟಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು,ಊರವರು,ಬಂಧು ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಪ್ರಗತಿಪರ ಕೃಷಿಕ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಮತ್ತು ಶ್ರೀಮತಿ ಸುಖ ಸತೀಶ್ ರೈ,ಡಾ. ಸವನ್ ರೈ,ಸಂಹಿತ ರೈ ಬಾರ್ದಡ್ಕ ಸ್ವಾಗತಿಸಿ, ಸತ್ಕರಿಸಿದರು.

Related posts

ರೈತರಿಗೆ ಬೆಳೆ ವಿಮೆ ಪಾವತಿಸಲು ಜು.31 ಕೊನೆಯ ದಿನ

Suddi Udaya

ಮುಂಡಾಜೆ: ಸೋಮಂತ್ತಡ್ಕದಲ್ಲಿ ಚರಂಡಿಗೆ ಬಿದ್ದ ಶಾಲಾ ಬಸ್

Suddi Udaya

ಮೂಡುಕೋಡಿ ಶೀನ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಗೇರುಕಟ್ಟೆಯಲ್ಲಿ ವಶ: ಸ್ಕೂಟರ್ ಸಹಿತ ಇಬ್ಬರು ಆರೋಪಿಗಳ ಬಂಧನ

Suddi Udaya

ಬ್ರೈನ್ ಹ್ಯಾಮರೇಜ್ ನಿಂದ ಬಳಲುತ್ತಿರುವ ಸುಳ್ಯದ ಸಂಧ್ಯಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಕ್ಷನ್ ರವರಿಗೆ ‘ಸಮಗ್ರ ಪ್ರಶಸ್ತಿ’

Suddi Udaya
error: Content is protected !!