23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ಶ್ರೀ ಧ.ಮಂ. ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ “ಫ್ಯೂಚರ್ ಹೆಚ್ ಆರ್ ಲೀಡರ್ಸ್” ವಿಶೇಷ ಕಾರ್ಯಾಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗವು “ಫ್ಯೂಚರ್ ಹೆಚ್ ಆರ್ ಲೀಡರ್ಸ್” ಎಂಬ ಐದು ದಿನಗಳ ವಿಶೇಷ ಕಾರ್ಯಗಾರವನ್ನು ಆಯೋಜಿಸಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ನ.19 ರಂದು ಜರಗಿತು.

ಕಾರ್ಯಗಾರವನ್ನು ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಹೆಚ್.ಆರ್ ಸ್ಪೆಕ್ಟ್ರಮ್ ಸ್ಥಾಪಕರಾದ ಮನ್ಮಥ ‍ಹೆಚ್.ವಿ ಭಾಗಿಯಾಗಿದ್ದರು. ಎಲ್ಲ ಕಂಪನಿಗಳಲ್ಲಿ ಮನವಶಕ್ತಿ ನಿರ್ವಹಣೆ ವಿಭಿನ್ನವಾಗಿರುತ್ತವೆ ಅದರಂತೆ ನಾವು ಸಿದ್ಧವಾಗಬೇಕು. ಕೋಟಿ ಖರ್ಚು ಮಾಡಿ ಎಮ್.ಬಿ.ಬಿ.ಎಸ್ ಮಾಡುವ ಬದಲು ಹೆಚ್ ಆರ್ ಮಾಡಿ ನಮ್ಮದೇ ಸಂಸ್ಥೆಯನ್ನು ಸ್ಥಾಪಿಸಬಹುದು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು, ಇಂತ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರೆ ಒಳ್ಳೆಯ ಪ್ರಾಯೋಗಿಕ ಜ್ಞಾನ ಸಿಗುತ್ತವೆ ಮತ್ತು ಸಮಾಜಕಾರ್ಯ ವಿಭಾಗದ ಹೆಚ್ ಆರ್ ವಿದ್ಯಾರ್ಥಿಗಳಿಗೆ ವೃತ್ತಿಯಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ . ಪಿ ,ಮುಖ್ಯಸ್ಥರು ಎಸ್ ಡಿ ಎಂ ಪಿ ಜಿ ಸೆಂಟರ್ , ಹೆಚ್ ಆರ್ ಸ್ಪೆಕ್ಟ್ರಮ್ ಇದರ ತಂಡದ ಸದಸ್ಯರಾದ ಶ್ರೀಮತಿ ಸುಷ್ಮಿತಾ ಹಾಗೂ ಗಿರೀಶ್ ಉಪಸ್ಥಿ‍ತರಿದ್ದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಇವರು ಸ್ವಾಗತಿಸಿ, ವಿದ್ಯಾರ್ಥಿನಿ ತೇಜಸ್ವಿನಿ ಇವರು ವಂದಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುವೀರ್ ಜೈನ್ ಮತ್ತು ಡಾ| ಅತುಲ್. ಎಸ್. ಸೇಮಿತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಕೃತಿ ಕಾರ್ಯಕ್ರಮ ನಿರೂಪಿಸಿದರು.

Related posts

ಇಳಂತಿಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ವಸಂತ ಶೆಟ್ಟಿ ಶ್ರದ್ದಾರವರಿಂದ 25ನೇ ಬಾರಿಗೆ ರಕ್ತದಾನ

Suddi Udaya

ಬೆಳ್ತಂಗಡಿ ತಾಲೂಕಿನ ಕಲಾವಿದರೇ ನಟಿಸಿ- ನಿರ್ಮಾಣ ಮಾಡಿರುವ ಧರ್ಮಸ್ಥಳ ಕಾತ್ಯಾಯಣಿ ಕ್ರಿಯೆಷನ್‌ನವರ “ತೀರ್ಪು” ಟೆಲಿಫಿಲ್ಮ್ ಯೂಟ್ಯೂಬ್ ನಲ್ಲಿ ಬಿಡುಗಡೆ

Suddi Udaya

ಓಡಲ ಶಿವ-ಪಾರ್ವತಿ ಮಹಿಳಾ ಭಜನಾ ತಂಡದಿಂದ ನಿವೃತ್ತ ಶಿಕ್ಷಕಿ ಸೀತಮ್ಮ ರವರಿಗೆ ಗುರುವಂದನೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ಬೆಳ್ತಂಗಡಿ: ಸವಿತಾ ಸಮಾಜದ ವತಿಯಿಂದ ಪೂವಪ್ಪ ಭಂಡಾರಿ ಹಾಗೂ ಮೋಹನ್ ಭಂಡಾರಿ ರವರಿಗೆ ಸನ್ಮಾನ

Suddi Udaya
error: Content is protected !!