September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿಯ ಧೃತೇಶ್ ಪಕ್ಕಳರಿಗೆ ಚಿನ್ನದ ಪದಕ

ತಣ್ಣೀರುಪಂತ: ನೇಪಾಳದಲ್ಲಿ ನ.28ರಿಂದ ಡಿ.2ರವರೆಗೆ ನೇಪಾಳ ಪಿಸಿಎ ಸ್ಪೋಟ್ ೯ ಇವೆಂಟ್ಸ್ ಮ್ಯಾನೇಜ್ಮೆಂಟ್ ಆಯೋಜಿಸಿರುವ ಇಂಡೋ- ನೇಪಾಳ ಅಂತಾರಾಷ್ಟ್ರೀಯ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್-2024ರಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಮೆಂಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಬೆಳ್ತಂಗಡಿಯ ಧೃತೇಶ್ ಸಿ. ಪಕ್ಕಳ ಚಿನ್ನದ ಪದಕ ಪಡೆದಿದ್ದಾರೆ.

ಗೋವಾದಲ್ಲಿ ಯುವ ಮತ್ತು ಕ್ರೀಡಾ ಪ್ರಮೋಷನ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ 4ನೇ ವೈಎಸ್‌ಪಿಎ ರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ ಕಪ್- 2024ರಲ್ಲಿ ಬೆಳ್ತಂಗಡಿ ತಾಲೂಕಿನ ಧೃತೇಶ್ ಸಿ. ಪಕ್ಕಳ ಪ್ರತಿನಿಧಿಸಿರುವ ಕರ್ನಾಟಕ ತಂಡ ಚಿನ್ನದ ಪದಕ ಗಳಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದರು.

ಇವರು ಪುತ್ತಿಲ ಗ್ರಾಮದ ಕುಂಡಡ್ಕದ, ಮಡಂತ್ಯಾರು ಶ್ರೀ ದೇವಿ ಟ್ರಾವೆಲ್ಸ್ ಮಾಲಕ ಚಂದ್ರಹಾಸ ಪಕ್ಕಳ – ಮಡಂತ್ಯಾರು ಮಹಿಳಾ ಮಂಡಲದ ಕಾರ್ಯದರ್ಶಿ ರೋಹಿಣಿ ಸಿ. ಪಕ್ಕಳ ದಂಪತಿ ಪುತ್ರ. ದೆಹಲಿಯಲ್ಲಿ 2023ರಲ್ಲಿ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ನಡೆದ 44ನೇ ಸಬ್ ಜ್ಯೂನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಶಾಲಾ ದಿನಗಳಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಧೃತೇಶ್, ಪ್ರಸ್ತುತ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿ ಪದವಿ ಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರಿಗೆ ಪ್ರವೀಣ್ ಉಜಿರೆ, ಸುಧೀನ್ ಪೂಜಾರಿ ಉಜಿರೆ, ಸಂದೇಶ್ ಪೂಂಜ ಉಜಿರೆ, ಕೌಶಲ್ ಮಂಗಳೂರು ಮತ್ತು ಅರುಣ್ ಮಾರ್ಗದರ್ಶನ ನೀಡಿದ್ದಾರೆ.

Related posts

ಕೆ.ಪಿ.ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಸೌತಡ್ಕ ದೇವಸ್ಥಾನದ ವತಿಯಿಂದ ಶ್ರೀಮತಿ ಶುಭ ಮರಾಟೆ ರವರಿಗೆ ರೂ 40ಸಾವಿರ ಚೆಕ್ ಹಸ್ತಾಂತರ

Suddi Udaya

ಕಕ್ಯಪದವು; ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಬೆಳಾಲು ಶ್ರೀ ಅನಂತೇಶ್ವರ ಭಜನಾ ಮಂಡಳಿ ನೇತೃತ್ವದಲ್ಲಿ ಮಕ್ಕಳ ಭಜನಾ ತರಬೇತಿ ತಂಡ ಉದ್ಘಾಟನೆ

Suddi Udaya

ಮಹೇಶ್‌ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Suddi Udaya

ಉಜಿರೆ: ಎಸ್.ಡಿ.ಎಂ ಜೂನಿಯರ್ ಇಂಡಿಯನ್ ರೆಡ್ ಕ್ರಾಸ್ ಹಾಗೂ ಯುತ್ ರೆಡ್ ಕ್ರಾಸ್ ನಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರ

Suddi Udaya
error: Content is protected !!