ವೇಣೂರು: ಸ. ಕಿ. ಪ್ರಾ. ಶಾಲೆ ಕುದ್ಯಾಡಿಯಲ್ಲಿ ಇತ್ತೀಚೆಗೆ ಬಹಳ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಕುದ್ಯಾಡಿಗುತ್ತಿನ ಪ್ರಗತಿಪರ ಕೃಷಿಕ ಉದ್ಯಮಿ ವಿಶ್ವನಾಥರು ದೀಪ ಪ್ರಜ್ವಲನ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಶಾಲೆಯ ಎಲ್ಲಾ ಮಕ್ಕಳಿಂದ ವೈಯಕ್ತಿಕವಾಗಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಹಂಚುವ ಮೂಲಕ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ಸ್ಮಾರ್ಟ್ ಟಿ.ವಿಯನ್ನು ಸುಲ್ಕೇರಿ ಪಂಚಾಯತ್ ನ ಉಪಾಧ್ಯಕ್ಷ ಶುಭಕರರವರು ಉದ್ಘಾಟಿಸಿದರು.

ಅಳದಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ವಸಂತಿ ಇವರ ಪುತ್ರ ಶರತ್ ಕೊಡುಗೆಯಾಗಿ ನೀಡಿದ ಸ್ಟೀಲ್ ಬಾಟಲಿಯನ್ನು ಮಕ್ಕಳಿಗೆ ವಿತರಿಸಲಾಯಿತು. ಅಳದಂಗಡಿ ದುರ್ಗಾ ಗ್ಯಾರೇಜ್ ಹಾಗೂ ದುರ್ಗಾ ಕಾಂಪ್ಲೆಕ್ಸ್ ಪಿಲ್ಯ ಇದರ ಮಾಲಕರಾದ ಪದ್ಮನಾಭ ಕುಲಾಲ್ ಮಕ್ಕಳಿಗೆ ಉಚಿತವಾಗಿ ಟೈ, ಬೆಲ್ಟ್, ಐಡಿ ಕಾರ್ಡ್ ವಿತರಿಸಿದರು. ಸುಲ್ಕೇರಿ ಪಂಚಾಯತ್ ಸದಸ್ಯರಾದ ಶ್ರೀಮತಿ ಯಶೋಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಶ್ರೀ ಸಾಯಿ ಬೇಕರಿ ಮಾಲಕ ಸುನಿಲ್ ಮಕ್ಕಳಿಗೆ ಉಚಿತವಾಗಿ ಕೇಕ್ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿಯ ಸಮಿತಿಯ ಅಧ್ಯಕ್ಷ ಪ್ರವೀಣ್ ರವರು ವಹಿಸಿದರು. ವೇದಿಕೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಯುವಕ ಮಂಡಲದ ಅಧ್ಯಕ್ಷ ಸದಾನಂದ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಲಕ್ಷ್ಮಿ. ಉಪಸ್ಥಿತರಿದ್ದರು. ಮಕ್ಕಳು ಪ್ರಾರ್ಥಿಸಿ, ಮುಖ್ಯೋಪಾಧ್ಯಯರಾದ ನಾಗಭೂಷಣ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳ ಪೋಷಕರು, ಅಡುಗೆ ಸಿಬ್ಬಂದಿ ಸಹಕರಿಸಿದರು. ಶಿಕ್ಷಕಿ ಕುಮಾರಿ ರೇಖಾ ಧನ್ಯವಾದವಿತ್ತರು.