
ಲಾಯಿಲ : ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಲಾಯಿಲ ಇದರ ಬೆಳ್ಳಿ ಹಬ್ಬ ಕಾರ್ಯಕ್ರಮ ನ.23 ರಂದು ಶ್ರೀ ಕೃಷ್ಣಾನುಗ್ರಹ ಸಭಾಭವನ, ಉಜಿರೆಯಲ್ಲಿ ನಡೆಯಿತು.
ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಕೆ. ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಶಾಲಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ಅಧ್ಯಕ್ಷ ವಂ. ಫಾ. ಆಲ್ವಿನ್ ಡಾಯಸ್, ವಿಧಾನಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್, ಬೆಸ್ಟ್ ಫೌಂಡೇಶನ್ ಮುಖ್ಯಸ್ಥ ರಕ್ಷಿತ್ ಶಿವರಾಂ, ಮೂಡಬಿದಿರೆ ವಕೀಲರು ಶ್ರೀಮತಿ ಅಶ್ವಿನಿ ಡಿ.ಸೋಜಾ, ಸಿಕೆಎಸ್‌ಕೆ ನಿರ್ದೇಶಕ ವಂ. ಫಾ. ವಿನೋದ್ ಮಸ್ಕರೇನ್ಹಸ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಫಾ| ಅರುಣ್ ಲೋಬೋ, ಟ್ರಸ್ಟ್ ಉಪಾಧ್ಯಕ್ಷೆ ಶಶಿಕಲಾ, ಜೊತೆ ಕಾರ್ಯದರ್ಶಿ ಪ್ರಮೀಳಾ, ಖಜಾಂಜಿ ಶ್ರೀಮತಿ ಅನ್ನಮ್ಮ ವರ್ಗೀಸ್, ಶ್ರೀಮತಿ ಇಂದಿರಾ, ಶ್ರೀಮತಿ ಚೈತ್ರಾ, ಹಾಗೂ ಸಹ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೆರಿನ್ ಸ್ವಾಗತಿಸಿ ಕಾಯ೯ದಶಿ೯ ರೈನಾ ಲೋಬೋ ವರದಿ ವಾಚಿಸಿದರು.