ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ-8 ಮಂಗಳೂರು ವಿಭಾಗ ಅತಿಥೇಯ ಜೈನ್ ಮಿಲನ್ ಬೆಳ್ತಂಗಡಿ ಇದರ ವತಿಯಿಂದ ಮಂಗಳೂರು ವಿಭಾಗ ಮಟ್ಟದ
ಜಿನಭಜನಾ ಸ್ಪರ್ಧೆ 2024 ನ. 24 ಆದಿತ್ಯವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಆರಂಭಗೊಂಡಿತು.
ಜಿನಭಜನಾ ಸ್ಪರ್ಧೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷ ರಾದ ಡಿ.ಅನಿತಾ ಸುರೇಂದ್ರ ಕುಮಾರ್,
ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೀವಂಧರ ಕುಮಾರ್, ಆಡಳಿತ ಮೊಕ್ತಸರರು ಶ್ರೀ ಕ್ಷೇತ್ರ ಕೊಡಮಣಿತ್ತಾಯ ಮೂಲಕ್ಷೇತ್ರ, ಪಡ್ಡಾರಬೆಟ್ಟ, ಪ್ರಸನ್ನ ಕುಮಾರ್, ಕಾರ್ಯಾಧ್ಯಕ್ಷರು, ಭಾರತೀಯ ಜೈನ್ ವಿಲನ್ ವಲಯ-8, ಪ್ರವೀಣಕುಮಾರ್ ಇಂದ್ರ ಕಾರ್ಯದರ್ಶಿಗಳು, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ವೇಣೂರು, ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು, ಎಕ್ಸೆಲ್ ಪಿ.ಯು. ಕಾಲೇಜು, ಗುರುವಾಯನಕೆರೆ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸೋನಿಯಾ ಯಶೋವರ್ಮ ಸಂಯೋಜಕರು ಜಿನಭಜನಾ ಸ್ಫಧೆ೯ ವಲಯ-8, ಜೈನ್ ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಬೆಳ್ತಂಗಡಿ ,
ಸುದರ್ಶನ್ ಜೈನ್ ಉಪಾಧ್ಯಕ್ಷರು, ಭಾರತೀಯ ಜೈನ್ ಮಿಲನ್ ವಲಯ – 8, ಸುಭಾಶ್ಚಂದ್ರ ಜೈನ್ ಕಾರ್ಯದರ್ಶಿ, ಮಂಗಳೂರು ವಿಭಾಗ, ಸಂಪತ್ ಕುಮಾರ್ ಕಾರ್ಯದರ್ಶಿ, ಜೈನ್ ಮಿಲನ್, ಬೆಳ್ತಂಗಡಿ, ಡಾ. ನವೀನ್ ಕುಮಾರ್ ಜೈನ್ ಅಧ್ಯಕ್ಷರು, ಜೈನ್ ಮಿಲನ್, ಬೆಳ್ತಂಗಡಿ, ಬಿ. ಸೋಮಶೇಖರ್ ಶೆಟ್ಟಿ ನಿರ್ದೇಶಕರು, ಮಂಗಳೂರು ವಿಭಾಗ, ನಿಖಿತ್ ಜೈನ್ ಖಜಾಂಚಿ, ಜೈನ್ ಮಿಲನ್, ಬೆಳ್ತಂಗಡಿ,
ವಿಭಾಗದ ನಿರ್ದೇಶಕರುಗಳಾದ ಜಯರಾಜ್ ಕಂಬಳಿ, ಬಿ. ಪ್ರಮೋದ್ ಕುಮಾರ್, ಯುವರಾಜ ಬಲಿಪ, ಶ್ರೀವರ್ಮ ಅಜ್ರಿ, ಸುಕುಮಾರ್ ಬಲ್ಲಾಳ್, ರಾಜಶ್ರೀ ಎಸ್. ಹೆಗ್ಡೆ, ಜೊತೆ ಕಾರ್ಯದರ್ಶಿಗಳು ಶ್ವೇತಾ ಜೈನ್, ಶಶಿಕಲಾ ಹೆಗ್ಡೆ ಉಪಸ್ಥಿತರಿದ್ದರು.
ನಿರೀಕ್ಷ ಜೈನ್ ಅವರ ಪ್ರಾಥ೯ನೆ ಬಳಿಕ ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಸುದಶ೯ನ್ ಜೈನ್ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಕುಮಾರಿ ಮತ್ತು ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.