27.3 C
ಪುತ್ತೂರು, ಬೆಳ್ತಂಗಡಿ
November 29, 2024
ಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿರಶ್ಮಿತಾ ಜೈನ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಮೂಡುಬಿದಿರೆ: ಪ್ರಸಕ್ತ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃರಾದ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಅವರಿಗೆ ಎಕ್ಸಲೆ೦ಟ್ ವಿದ್ಯಾ ಸಂಸ್ಥೆಯಲ್ಲಿ ಅಭಿನ೦ದಿಸಲಾಯಿತು.

ಕಾರ್ಕಳ ವರ್ಧಮಾನ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷೆ ಶಶಿಕಲಾ ಹೆಗ್ಡೆ ಅಭಿನ೦ದನಾ ನುಡಿಗಳನ್ನಾಡುತ್ತಾ ಸೂಕ್ತ ಅವಕಾಶ ಸಿಕ್ಕಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಅನ್ನುವುದಕ್ಕೆ ರಶ್ಮಿತಾ ಜೈನ್ ಅವರೇ ಸಾಕ್ಷಿ ಎ೦ದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಉಪಾಧ್ಯಕ್ಷೆ ಡಿ. ಅನಿತಾ ಸುರೇ೦ದ್ರ ಕುಮಾರ್ ಎಕ್ಸಲೆಂಟ್ ಸಂಸ್ಥೆಯ ಸಿಬ್ಬಂದಿಗಳು ರಶ್ಮಿತಾ ಜೈನ್ ಕುರಿತು ರಚಿಸಿದ ಕವನ ಮತ್ತು ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಯಶಸ್ಸು ಶ್ರಮವನ್ನು ಬೇಡುತ್ತದೆ. ಶಿಸ್ತು, ಸರಳತೆ, ಕರ್ತವ್ಯಪ್ರಜ್ಞೆ, ಗುರುವಿನ ಮಾರ್ಗದರ್ಶನದ ಮೂಲಕವಷ್ಟೇ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯ ಎಂದರು.

ಅಭಿನ೦ದನೆಗೆ ಉತ್ತರಿಸಿದ ರಶ್ಮಿತಾ ಜೈನ್ ಅವರು, ಈ ಪ್ರಶಸ್ತಿ ಸ೦ಸ್ಥೆಯ ಸಕಲರಿಗೂ ಸ೦ದ ಗೌರವ. ಶಿಕ್ಷಣ ಸೇವೆಯನ್ನು ಸಮರ್ಪಣಾ ಮನೋಭಾವದಿ೦ದ, ಪ್ರಾಮಾಣಿಕ ಪ್ರಯತ್ನದಿ೦ದ ಮಾಡುವಲ್ಲಿ ಗುರುಹಿರಿಯರ ಮಾರ್ಗದರ್ಶನ ಅಮೂಲ್ಯವಾಗಿದೆ. ಆರ೦ಭದ ದಿನಗಳಲ್ಲಿ ಅವಮಾನ, ಸಂಘರ್ಷಗಳನ್ನು ಎದುರಿಸುತ್ತಲೇ ಸಂಸ್ಥೆಯನ್ನು ಮತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಸವಾಲು ಎದುರಿಗಿತ್ತು. ಈ ಅನುಭವವೇ ನನ್ನ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋಯಿತು, ಸಮಾಜದ ಪ್ರೀತಿಗೆ ನಾನು ಚಿರಋಣಿ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡುತ್ತಾ ಗುರುಹಿರಿಯರ ಬೆ೦ಬಲ ಒಳ್ಳೆಯ ಯೋಜನೆಗೆ ಮತ್ತು ಸಾಧನೆಗೆ ರಹದಾರಿಯಾಗಿದೆ. ರಶ್ಮಿತಾ ಜೈನ್ ಅವರು ಈ ವಿದ್ಯಾ ಸ೦ಸ್ಥೆಯನ್ನು ಕಟ್ಟಿದಾಗಿನಿ೦ದ ಪಕ್ಕದಲ್ಲಿ ನಿ೦ತು ಸ೦ಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಮನೆ ಬಿಟ್ಟು ವಸತಿನಿಲಯದಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮ್ಮನ ಕೊರತೆ ಕಾಡದ೦ತೆ ಅಮ್ಮನ ಪ್ರೀತಿಯನ್ನು ತೋರುವ ಮಮತೆಯ ಪ್ರತಿರೂಪವಾಗಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾಗಿರುವ ಅಭಯಚ೦ದ್ರ ಜೈನ್ ವಹಿಸಿದರು.

ವೇದಿಕೆಯಲ್ಲಿ ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.

ಈ ಸ೦ದರ್ಭದಲ್ಲಿ ಶಿಕ್ಷಕ ಭಾಸ್ಕರ್ ನೆಲ್ಯಾಡಿ ರಚಿಸಿರುವ ಗೀತೆಯನ್ನು ಹಾಡುವುದರ ಮೂಲಕ ಸ೦ಸ್ಥೆಯ ವಿದ್ಯಾರ್ಥಿಗಳು ಗೀತ ನಮನವನ್ನು ಸಲ್ಲಿಸಿದರು.


ಆಡಳಿತ ನಿರ್ದೇಶಕ ಡಾ. ಬಿ.ಪಿ. ಸ೦ಪತ್ ಕುಮಾರ್ ಸ್ವಾಗತಿಸಿದರು. ಎಕ್ಸಲೆ೦ಟ್ ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು. ಎಕ್ಸಲೆ೦ಟ್ ಸಿಬಿಎಸ್ಸಿ ಶಾಲೆಯ ಪ್ರಾ೦ಶುಪಾಲ ಸುರೇಶ್ ದೇವಾಡಿಗ ವ೦ದಿಸಿದರು. ಡಾ ವಾದಿರಾಜ ಕಲ್ಲೂರಾಯ ಮತ್ತು ಜಯಶೀಲ ಕಾರ್ಯಕ್ರಮ ನಿರೂಪಿಸಿದರು.

Related posts

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya

ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ ಹಾಗೂ ವಿವಿಧ ಸಂಘಗಳಿಂದ ರಾಮ ದೀಪೋತ್ಸವ

Suddi Udaya

ಧರ್ಮಸ್ಥಳ: ಮಗನನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲು

Suddi Udaya

ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆ ಕುಸಿತ, ಶೀಘ್ರ ದುರಸ್ಥಿಗೆ ಆಗ್ರಹ

Suddi Udaya

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೃತ್ಯ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಉಪನ್ಯಾಸಕರ ತಂಡವು ಪ್ರಥಮ ಸ್ಥಾನ

Suddi Udaya
error: Content is protected !!