ಬೆಳ್ತಂಗಡಿ: ಜಿಲ್ಲೆಯಾದ್ಯಂತ ಮಾದಕವಸ್ತು ಸೇವನೆ/ಮಾರಾಟ ಹಾಗೂ ಅಕ್ರಮ ಮದ್ಯಮಾರಾಟದ ವಿರುದ್ದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ: ಇಳಂತಿಲ ಗ್ರಾಮದ ಕಲ್ಲಾಜೆ ಗುಡ್ಡೆ ಎಂಬಲ್ಲಿ ನ.24 ರಂದು ಸಾರ್ವಜನಿಕ ಬಸ್ಸು ಪ್ರಯಾಣಿಕರ ತಂಗುದಾಣದ ಬಳಿ ಮಧ್ಯಪಾನ ಮಾಡುತ್ತಿದ್ದ ಆರೋಪಿತ ಬೆಳಿಯಪ್ಪ ಗೌಡ (58) ಎಂಬಾತ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 126/2024, ಕಲಂ 15(A),32(3) KE Act ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ ಹಾಗೂ ಆತ ಸೇವಿಸುತ್ತಿದ್ದ ಮದ್ಯವನ್ನು ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾದೀನಪಡಿಸಲಾಗಿದೆ.
ಕಳಿಯ ಗ್ರಾಮದ ಗೇರುಕಟ್ಟೆ ಬಸ್ಸು ನಿಲ್ದಾಣದ ಒಳಗಡೆ ಇಬ್ಬರು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿದ್ದು, ಯಲ್ಲಪ್ಪ ಹೆಚ್. ಮಾದಾರ್ ಪೊಲೀಸ್ ಉಪ ನಿರಿಕ್ಷಕರು, (ತನಿಖೆ)ಬೆಳ್ತಂಗಡಿ ಪೊಲೀಸ್ ಠಾಣೆರವರು ಸ್ಥಳಕ್ಕೆ ತೆರಳಿ ಆರೋಪಿತ ಸತೀಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನೋರ್ವ ವ್ಯಕ್ತಿಯು ಓಡಿ ತಪ್ಪಿಸಿಕೊಂಡಿರುತ್ತಾನೆ. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಸೇವಿಸುತ್ತಿದ್ದ ಮದ್ಯವನ್ನು ಸ್ವಾಧೀನಪಡಿಕೊಂಡು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 94/2024 ಕಲಂ;15(ಎ)32(3) ಅಬಕಾರಿ ಕಾಯ್ದೆ ಯಡಿ ಪ್ರಕರಣ ದಾಖಲಿಸಲಾಗಿದೆ.