25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ: ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

ಇಂದಬೆಟ್ಟು: ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇಂದಬೆಟ್ಟು ಇದರ ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ (ಬಿಜೆಪಿ) ಬೆಂಬಲಿತ 11 ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಈ ಚುನಾವಣೆಯು ಬಿಜೆಪಿ ಬೆಂಬಲಿತರು ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷವು ಸತತ ಎರಡನೇ ಅವಧಿಗೆ 2 ಸ್ಥಾನ ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಂಡಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀಮತಿ ಕುಸುಮಾವತಿ ಶಶಿಧರ ಗೌಡ, ಶ್ರೀಮತಿ ರೇಣುಕಾ ವಸಂತಗೌಡ, ಶ್ರೀಮತಿ ಲೀಲಾ ಸನತ್ ಆಚಾರ್ಯ, ಶ್ರೀಮತಿ ಸುಮತಿ ಶೇಖರಗೌಡ ಕುದುರು, ಶ್ರೀಮತಿ ಸೌಮ್ಯಾ ಸುರೇಂದ್ರ ಕುಕ್ಕಿಮಾರು, ಶ್ರೀಮತಿ ಸುಮಿತ್ರಾ ಕೊರಗಪ್ಪ ಗೌಡ, ಶ್ರೀಮತಿ ಹೇಮಾವತಿ ವೆಂಕಪ್ಪ ಮೂಲ್ಯ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಅಕ್ಕಮ್ಮ ಶ್ರೀಧರ ಮುಗೇರ ನೇತ್ರಾವತಿ ನಗರ ಜಯಗಳಿಸಿದ್ದಾರೆ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಶ್ರೀಮತಿ ಪ್ರೇಮಾ ವಿದ್ಯಾನಂದ ಗುಡಿಗಾರ್, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಶ್ರೀಮತಿ ಸುರೇಖಾ ನವೀನ್ ಜೈನ್ ಪಾದೆ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಶ್ರೀಮತಿ ವಿನುತಾ.ಡಿ ಸುದೀಶ್ ಕುಮಾರ್ ಅಟಿಕ್ಕು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ವಾರಿಜಾ ಪ್ರವೀಣ್ ಹಾಗೂ ಶ್ರೀಮತಿ ಶಾಂತಾ ಅಲ್ಪ ಮತಗಳಿಂದ ಪರಾಭವಗೊಂಡರು , ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಆಶಾಗಣೇಶ್, ಶ್ರೀಮತಿ ಎಲ್ಸಿ ವಿಜಯಿಯಾದರೆ ಶ್ರೀಮತಿ ಲೀಲಾವತಿ, ಶ್ರೀಮತಿ ವನಜಾ, ಶ್ರೀಮತಿ ವಿಮಲಾ ಹಾಗೂ ಶ್ರೀಮತಿ ರಾಮಕ್ಕ ಪರಾಭವಗೊಂಡರು.

ಚುನಾವಣಾ ಫಲಿತಾಂಶ ನಂತರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಮತ್ತು ನೂತನವಾಗಿ ಆಯ್ಕೆಯಾದ ಎಲ್ಲರನ್ನೂ ಕಾರ್ಯಕರ್ತರ ಪರವಾಗಿ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ, ಸದಸ್ಯರಾದ ಅನಂದ ಅಡಿಲು, ಚುನಾವಣಾ ಉಸ್ತುವಾರಿ ಬೆಳ್ತಂಗಡಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಪಳನಿ ಸ್ವಾಮಿ ಪಿ.ಆರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ಎನ್, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಉಪಾಧ್ಯಕ್ಷ ವಸಂತ ಗೌಡ ಕಲ್ಲಾಜೆ, ನಿರ್ದೇಶಕರಾದ ರಮೇಶ್ ಕೆಂಗಾಜೆ, ರಘುನಾಥ ಕೊಲ್ಲಿ, ಪುಷ್ಪಲತಾ ನೀಲಯ್ಯ ಗೌಡ ದೇವನಾರಿ, ಬೂತ್ ಅಧ್ಯಕ್ಷ ನಿತೇಶ್ ಕಡಿತ್ಯಾರು, ನವೀನ್ ಜೈನ್, ಸಂಜೀವ ಗೌಡ, ಕಾರ್ಯದರ್ಶಿಗಳಾದ ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ಬಿಜೆಪಿ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದರು.

Related posts

ನಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಮಚ್ಚಿನ: ರಸ್ತೆಯ ಬದಿಯಲ್ಲಿ ತ್ಯಾಜ್ಯಗಳ ದುರ್ವಾಸನೆ: ಕ್ರಮ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ನೆರಿಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಸರೋಜಾ ನಿವೃತ್ತಿ

Suddi Udaya

ಧರ್ಮಸ್ಥಳ: ರಾಷ್ಟ್ರೀಯ ತುಳು ಗುಡಿಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೆಸರು ಗದ್ದೆ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!