April 2, 2025
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ : ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ನ.25 ರಂದು ಬೆಳ್ತಂಗಡಿ ಪಟ್ಟಣ ಪಂಚಾಯತದ ಕೆಲ್ಲಗುತ್ತು ಪರಿಸರದ ಸಂಸ್ಥೆಯ ನಿವೇಶನದಲ್ಲಿ ಜರುಗಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು ದೇವರಾವ್, ನಿವೃತ್ತ ಮೇಜರ್ ಜನರಲ್ ಯಮ್. ವಿ. ಭಟ್ , ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಶಿವರಾಮ ಶಿಶಿಲ ಕ್ಷೀರಾಭಿಷೇಕ ಮಾಡುವ ಮೂಲಕ ಶಿಲಾನ್ಯಾಸವನ್ನು ನೆರವೇರಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ನಿವೃತ್ತ ನೌಕರರ ಸಂಘ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಬಿ. ವಿಠಲ ಶೆಟ್ಟಿ ವಹಿಸಿದ್ದರು.

ಕ.ರಾ.ಸ.ನಿ.ನೌಕರರ ಸಂಘದ ಮೈಸೂರು ವಿಭಾಗ ಸಂಘಟಕರು ಡಾ| ಕೆ.ಜಯಕೀರ್ತಿ ಜೈನ್, ಪುತ್ತೂರು ಕ.ರಾ.ಸ.ನಿವೃತ್ತ ನೌಕರರ ಸಂಘ ಅಧ್ಯಕ್ಷ ಐತಪ್ಪ ನ್ಯಾಕ್ , ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೇಲ್ಕಾರ್ ಅಧ್ಯಕ್ಷ ನಾರಾಯಣ ಭಟ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಬೆಳ್ತಂಗಡಿ ಕ.ರಾ.ಸ. ನೌಕರರ ಸಂಘ ಅಧ್ಯಕ್ಷ ಜಯರಾಜ ಜೈನ್ ಶುಭಾಶಂಸನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಭುಜಬಲಿ ಧರ್ಮಸ್ಥಳ, ಪ್ರಗತಿಪರ ಕೃಷಿಕ ತಿಮ್ಮಪ್ಪ ಗೌಡ ಕಡ್ಯಾರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್/ನಿ.ನೌ.ಸಂಘ ಖಜಾಂಚಿ ಜಗನ್ನಿವಾಸ ರಾವ್ , ಸೇವಾ ಟ್ರಸ್ಟ್/ನಿ.ನೌ.ಸಂಘ ಕಾರ್ಯದರ್ಶಿ ವಿಶ್ವಾಸ ರಾವ್ , ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಕೆ.ದಾಸಪ್ಪ ಗೌಡ , ಸಮನ್ವಯಕಾರರು ವಸಂತ ಸುವರ್ಣ, ಸಂಯೋಜಕರು ಬಿ. ಸೋಮಶೇಖರ ಶೆಟ್ಟಿ ಉಜಿರೆ, ಆರ್ಥಿಕ ಸಮಿತಿ ಸಂಚಾಲಕರು ಗಣೇಶ್ ಐತಾಳ್ ,ಶಾಶ್ವತ ಟ್ರಸ್ಟಿ ಶ್ರೀಮತಿ ಅಚ್ಚಿನಡ್ಕ ವೀರಮ್ಮ, ಟ್ರಸ್ಟಿಗಳಾದ ಸೂರಪ್ಪ ಪೂಜಾರಿ, ಸನ್ಮತ್ ಕುಮಾರ್, ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ವಾರಿಜ ಸುವರ್ಣ, ಸಂಘದ ಉಪಾಧ್ಯಕ್ಷರು ಶ್ರೀಮತಿ ಕುಸುಮಾವತಿ, ಎಲ್ಲಾ ವಿಭಾಗದ ಸಂಘಟಕರು, ಸದಸ್ಯರು ಉಪಸ್ಥಿತರಿದ್ದರು.

ಗೀತಾ ರಮಾನಂದ ರಾವ್ ಪ್ರಾರ್ಥಿಸಿ, ಬೆಳ್ತಂಗಡಿ ನಿವೃತ್ತ ನೌಕರರ ಸಂಘ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಸ್ವಾಗತಿಸಿದರು, ನಿವೃತ್ತ ಮುಖ್ಯ ಶಿಕ್ಷಕ ವಸಂತ ರಾವ್ ಸುಲ್ಕೇರಿ ಕಾಯ೯ಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಂತರಿಕ ಗುಣಮಟ್ಟದ ಭರವಸೆ ಕೋಶ ವಾಣಿಜ್ಯ ಮತ್ತು ಹೂಡಿಕೆದಾರರ ಜಾಗೃತಿ ಕಾರ್ಯಾಗಾರ

Suddi Udaya

ಕನ್ಯಾಡಿ 1 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ : ಶಿಕ್ಷಕ ನಾಭಿರಾಜ ಜೈನ್ ರಿಗೆ ಸನ್ಮಾನ

Suddi Udaya

ಸರಕಾರಿ ಸೌಲಭ್ಯ ವಂಚಿತ ಕೊಕ್ಕಡ ಮಹಾವೀರ ಕಾಲನಿ: ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ ಗೌಡರಿಂದ ಸಚಿವರಿಗೆ ಮನವಿ

Suddi Udaya

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ

Suddi Udaya
error: Content is protected !!