39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಕೀಲರ ಭವನದಲ್ಲಿ ಸಂವಿಧಾನ ದಿನ ಆಚರಣೆ

ಬೆಳ್ತಂಗಡಿ : ವಕೀಲರ ಸಂಘ (ರಿ) ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಇದರ ನೇತೃತ್ವದಲ್ಲಿ ಇಂದು(ನ.26) 75ನೇ ಸಂವಿಧಾನ ದಿನಾಚರಣೆಯನ್ನುವಕೀಲರ ಭವನದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮವನ್ನು ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮನು ಬಿ.ಕೆ ಭಾರತ ಸಂವಿಧಾನದ ಪುಸ್ತಕ ಹಾಗೂ ಡಾ ಬಿ ಆರ್ ಅಂಬೇಡ್ಕರ್ ರವರಿಗೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಉದ್ಘಾಟಿಸಿ ಸಂವಿಧಾನದ ಪೀಠಿಕೆ ಯನ್ನು ನೆರೆದಿದ್ದ ಎಲ್ಲ ವಕೀಲರಿಗೆ ಬೋಧಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಇವರು ಸಂವಿಧಾನದ ಮಹತ್ವ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು.

ವೇದಿಕೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್, ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ ಕೆ ಹಾಗೂ ಯುವ ವಕೀಲರ ವೇದಿಕೆಯ ಅಧ್ಯಕ್ಷ ಸಂದೀಪ್ ಡಿಸೋಜ ಉಪಸ್ಥಿತರಿದ್ದರು. ಬೆಳ್ತಂಗಡಿ ವಕೀಲರ ಹಿರಿಯ ಸಮಿತಿ ಅಧ್ಯಕ್ಷರಾದ ಅಲೋಸಿಸ್ ಎಸ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂವಿಧಾನದ ತಿದ್ದುಪಡಿಗಳ ಬಗ್ಗೆ ಮತ್ತು ಸಂವಿಧಾನದ ವಾಸ್ತವಿಕತೆಯ ಬಗ್ಗೆ ವಿವರಿಸಿದ್ದರು.


ಕಾರ್ಯಕ್ರಮದಲ್ಲಿ ಯುವ ವಕೀಲರಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಸ್ಪರ್ದಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ರಸಪ್ರಶ್ನೆಯ ವಿಜೇತರ ಪಟ್ಟಿಯನ್ನು ಯುವ ವೇದಿಕೆ ಕಾರ್ಯದರ್ಶಿ ಶ್ರೀಮತಿ ಜೋಶ್ನಾ ವೆಲೋನ ಕೊರೆಯ ವಾಚಿಸಿದರು.

ಈ ಕಾರ್ಯಕ್ರಮದಲ್ಲಿ ಯುವ ವಕೀಲರಾದ ಜೋಬಿ ಜೋಯ್ ಸ್ವಾಗತಿಸಿ, ಶ್ವೇತಾ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹರ್ಷಿತ್ ಹೆಚ್ ನೆರವೇರಿಸಿದರು.

Related posts

ಬಳಂಜ: ಶಿವಾಜಿ ಪ್ರೆಂಡ್ಸ್ ಕ್ಲಬ್ ನಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ: ಕ್ಲಬ್ ವತಿಯಿಂದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ನವಿಲು

Suddi Udaya

ಕರಂಬಾರು ಗುತ್ತು ಸುಮಿತ್ರ ಹೆಗ್ಡೆಯವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ 

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಬಿಲ್ಲವ ಸಂಘ ಬೇಹರಿನ್ ಅಧ್ಯಕ್ಷ ಹರೀಶ್ ಪೂಜಾರಿ

Suddi Udaya
error: Content is protected !!