ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ 12ನೇ ವರ್ಷದ ಪಾದಯಾತ್ರೆ ನ.26ರಂದು ಜರುಗಿತು. ತಾಲೂಕಿನ 81 ಗ್ರಾಮಗಳಿಂದ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಯಲ್ಲಿ ಭಾಗವಹಿಸಿದರು.
ಉಜಿರೆ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ಶ್ರೀ ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಬೆಳ್ತಂಗಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಉಜಿರೆ ದೇವಸ್ಥಾನದ ಧ್ವಜಸ್ತಂಭದ ಬಳಿ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಪ್ರಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವುಳ್ಳ ಟ್ಯಾಬ್ಲೋ, ವಿವಿಧ ಯಕ್ಷಗಾನ ವೇಷ ಭೂಷಣಗಳು, ಭಜನಾ ತಂಡಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ವಿವಿಧ ಸಂಘ ಸಂಸ್ಥೆಯವರು ಪಾದಯಾತ್ರೆಯಲ್ಲಿ ಶಿಸ್ತಿನಿಂದ ಭಾಗವಹಿಸಿದರು. ಚೆಂಡೆ, ವಾದ್ಯ, ಸಮವಸ್ತ್ರಧಾರಿ ಭಕ್ತರು, ಯಕ್ಷಗಾನ ವೇಷಧಾರಿಗಳು,ಭಜನಾ ತಂಡಗಳ ಕುಣಿತ ಭಜನೆ ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಯು.ಸಿ ಪೌಲೋಸ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ನಿಕಟಪೂರ್ವ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಲಯನ್ಸ್ ಕ್ಲಬ್ ಪೂರಣ್ ವಮ೯, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಸಿರಿಗ್ರಾಮೋದ್ಯೋಗ ಸಂಸ್ಥಯ ನಿರ್ದೇಶಕ ಕೆ.ಎನ್.ಜನಾರ್ದನ್, ನ್ಯಾಯವಾದಿ ಧನಂಜಯ್ ರಾವ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಮಾಜಿ ಅಧ್ಯಕ್ಷ, ತಿಮ್ಮಪ್ಪ ಗೌಡ ಬೆಳಾಲು, ಡಿ.ಎ ರಹಿಮಾನ್, ಉದ್ಯಮಿ ಮೋಹನ ಶೆಟ್ಟಿಗಾರ್, ರಾಘವೇಂದ್ರ ನಾಯಕ್, ಕೊರಗಪ್ಪ ಗೌಡ ಚಾರ್ಮಾಡಿ, ಸೀತಾರಾಮ ಬೆಳಾಲ್, ರವೀಂದ್ರ ಶೆಟ್ಟಿ ಬಳಂಜ, ಡಾ. ಶ್ರೀಧರ ಭಟ್, ರವಿ ಚಕ್ಕಿತ್ತಾಯ, ವಡಿವೇಲು ಗುರುವಾಯನಕೆರೆ, ಮಮತಾ ಶೆಟ್ಟಿ, ಅಡೂರು ವೆಂಕಟ್ರಾವ್, ಜಯಂತಿ ಪಾಲೇದು, ಗಣೇಶ್ ಗೌಡ, , ಪ್ರಭಾಕರ ಪೊಸಂದೋಡಿ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೂದಪ್ಪ ಗೌಡ, . ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ವಿವೇಕ್ ವಿನ್ಸೆಂಟ್ ಪಾಯಿಸ್, ಮಮತಾ ಎಂ. ಶೆಟ್ಟಿ, , ಶ್ಯಾಮ್ ಸುಂದರ್ ನಡ, ಶಶಿಧರ ಕಲ್ಮಂಜ, ಅರುಣ್ ಕುಮಾರ್, ಡಾ. ಬಿ.ಎ ಕುಮಾರ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ ರಾವ್, ಅಡೂರು ವೆಂಕಟ್ರಾವ್,, ತಿಮ್ಮಪ್ಪ ಗೌಡ ಬೆಳಾಲು, ಪುಷ್ಪರಾಜ ಹೆಗ್ಡೆ ಮಡಂತ್ಯಾರು, ಉಜಿರೆ ಗ್ರಾ.ಪಂ ಅಧ್ಯಕ್ಷೆ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ವಿಠಲ ಶೆಟ್ಟಿ ಲಾಯಿಲ, ಶಂಕರ ಹೇಡ್ಯ, ಯೋಗೀಶ್ ಕುಮಾರ್ ನಡಕ್ಕರ, ಗಿರೀಶ್ ವೇಣೂರು, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹೆಗ್ಡೆ, ಪುಷ್ಪರಾಜ ಹೆಗ್ಡೆ ಮಡಂತ್ಯಾರು, ರತ್ನವರ್ಮ ಬುಣ್ಣು, ಪ್ರಶಾಂತ ಪಾರೆಂಕಿ,
ದುಗ್ಗೇಗೌಡ, ತಾಲೂಕು ಯೋಜನಾಧಿಕಾರಿಗಳು, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೫ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹೆಗ್ಗಡೆ ಅಭಿಮಾನಿಗಳು ಮೆರವಣಿಗೆಯ ಜೊತೆ ಸಾಗಿದರು.