30.6 C
ಪುತ್ತೂರು, ಬೆಳ್ತಂಗಡಿ
November 27, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಆಮಂತ್ರಣ ವೇದಿಕೆ ತಾಲೂಕು ಪದಗ್ರಹಣ ಮತ್ತು ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಬಹುಮಾನ ವಿತರಣೆ

ಉಜಿರೆ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ತಾಲೂಕು ಪದಗ್ರಹಣ ಉಜಿರೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನ.24 ರಂದು ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಜ್ಯೋತಿ ಪ್ರಜ್ವಲನೆ ಮಾಡುವುದರೊಂದಿಗೆ ನೆರವೇರಿಸಿ ಮಾತಾನಾಡುತ್ತಾ ಆಮಂತ್ರಣ ಎಂಬುದು ದೊಡ್ಡ ಪರಿವಾರ ಯಾವುದೇ ಸಾಹಿತ್ಯ ಪರಿಷತ್ ಮಾಡದ ಕೆಲಸಗಳನ್ನು ಆಮಂತ್ರಣ ಮಾಡುತ್ತಿದೆ. ಸಾಂಸ್ಕೃತಿಕ ಹಾಗೂ ಸೇವೆಯಲ್ಲಿ ದೇವರ ಮಕ್ಕಳೊಂದಿಗೆ ವಿಭಿನ್ನ ಕಾರ್ಯಕ್ರಮ ಮೂಡಿಬರುತ್ತಿರುವುದು ಹರ್ಷದಾಯಕ ಈ ಸಂಸ್ಥೆಗೆ ರಾಜ್ಯ ಪ್ರಶಸ್ತಿ ಬರಬೇಕು ಎಂದು ಹೇಳಿದರು.

ಬೆಳ್ತಂಗಡಿ ತಾಲೂಕು ಜಾನಪದ ಪರಿಷತ್ ಗೌರವಾಧ್ಯಕ್ಷ ಬಿ.ಭುಜಬಲಿ ಧರ್ಮಸ್ಥಳ ಬೆಳ್ತಂಗಡಿ ತಾಲೂಕು ಆಮಂತ್ರಣ ವೇದಿಕೆ ಅಧ್ಯಕ್ಷೆ ವಿದ್ಯಾಶ್ರೀ ಅಡೂರು ಇವರ ತಂಡಕ್ಕೆ ಪದಪ್ರಧಾನ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತು ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಮಾತಾನಾಡಿ ಇಂತಹ ಸಂಸ್ಥೆಗಳು ಮಾಡುವ ಕೆಲಸ ಕಾರ್ಯಕ್ಕೆ ಜನಸಾಮಾನ್ಯರ ಗಣ್ಯರ ಬೆಂಬಲ ಅಗತ್ಯವಾಗಿದೆ
ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳಿಗೆ ಉಜಿರೆ ಗ್ರಾಮ ಪಂಚಾಯತು ಸಹಕಾರ ನೀಡಲಿದೆ ಎಂದು ನುಡಿದರು.


ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ವೈ ಚಂದ್ರಮ ಮಾತಾನಾಡಿ ಒಂದೊಂದು ಸಂಸ್ಥೆಗಳು ಅವರದೇ ಆದ ಚಿಂತನೆಯೊಂದಿಗೆ ಕೆಲಸ ಕಾರ್ಯ ಮಾಡುತ್ತಿದೆ ಆದರೆ ಸ್ವಾರ್ಥವಿಲ್ಲದೆ ಮಕ್ಕಳೊಂದಿಗೆ ಕಲಾವಿದರೊಂದಿಗೆ ಬೆರೆತು ಪ್ರೀತಿ ಸ್ನೇಹ ಅಭಿಮಾನ ಸಂಪಾದಿಸಿದ ಸಂಸ್ಥೆ ಆಮಂತ್ರಣ ಬೆಳಗಲಿ ಎಂದು ಹಾರೈಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಕವಿಯಿತ್ರಿ ವಿದ್ಯಾಶ್ರೀ ಅಡೂರು ವಹಿಸಿದ್ದು ನಮ್ಮಿಂದ ಅನೇಕ ಕಾರ್ಯಕ್ರಮಗಳು ಆಗಲಿದ್ದು ಹೊಸತನದ ಯೋಚನೆಗೆ ಎಲ್ಲರ ಪ್ರೋತ್ಸಾಹ ಅತೀ ಅಗತ್ಯ ಎಂದು ನುಡಿದರು.

ಬಹುಮಾನ ವಿತರಣೆ
ಆಮಂತ್ರಣ ಪರಿವಾರ ಏರ್ಪಡಿಸಿದ್ದ ಮುದ್ದು ಮಗು ನೀ ನಗು ಫೋಟೋ ಸ್ಪರ್ಧೆಯ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ 30 ಮಕ್ಕಳು ಮೆಚ್ಚುಗೆ ಹಾಗೂ ವಿಶೇಷ ಸ್ಥಾನ ಪಡೆದವರು ಭಾಗವಹಿಸಿದ್ದರು.
ಕವಿಗೋಷ್ಠಿ
ಆಮಂತ್ರಣ ರಾಜ್ಯ ಸದಸ್ಯರಾದ ಹೆಚ್ ಕೆ ನಯನಾಡು ಅಧ್ಯಕ್ಷತೆಯಲ್ಲಿ ಪದಗ್ರಹಣ ಸಮಾರಂಭದ ಅಂಗವಾಗಿ ಸುಮಾರು 20 ಜನ ಕವಿಗಳು ಭಾಗವಹಿಸಿದ ಕವಿ ಗೋಷ್ಟಿ ವಿಶೇಷವಾಗಿ ನಡೆಯಿತು.

ಸಮಾರಂಭದಲ್ಲಿ ಆಮಂತ್ರಣ ಜಿಲ್ಲಾ ಅಧ್ಯಕ್ಷೆ ನಿರೀಕ್ಷಿತಾ, ಉಪಾಧ್ಯಕ್ಷೆ ವಿಂಧ್ಯಾ ಎಸ್ ರೈ ಕಡೇಶೀವಾಲಯ, ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬಂಟ್ವಾಳ ತಾಲೂಕು ಆಮಂತ್ರಣ ವೇದಿಕೆ ನೂತನ ಅಧ್ಯಕ್ಷೆ ರಶ್ಮಿತ ಸುರೇಶ್ ಜೋಗಿಬೆಟ್ಟು, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷರಾದ ರೂಪ , ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀದೇವಿ ಸಚಿನ್, ಧನರಾಜ ಆಚಾರ್ಯ ಬೆಳ್ತಂಗಡಿ, ಪ್ರಕಾಶ್ ಶೆಟ್ಟಿ ಧರ್ಮಸ್ಥಳ ಪ್ರಾಯೋಜಕರಾದ ಕಲಾಪ್ರತಿಭೆ ತಂಡದ ಪ್ರಕಾಶ್ ಆಚಾರ್ಯ, ವಿಜಯಚಂದ್ರ‌ ಮುಂಡ್ಲಿ, ಮೂಡಬಿದ್ರೆ ನ್ಯೂ ಫ್ಯಾಶನ್ ಪಾಯಿಂಟ್ ಮಾಲಕಿ ಸುಶ್ಮೀತಾ ಭಾಗವಹಿಸಿದ್ದರು.

ಆಮಂತ್ರಣ ತಾಲೂಕು ಕಾರ್ಯದರ್ಶಿ ಅಶ್ವಿಜ ಶ್ರೀಧರ್ ಪ್ರಾರ್ಥಿಸಿದರು. ಆಮಂತ್ರಣ ರಾಜ್ಯ ಸದಸ್ಯೆ ಉಮಾ ಸುನಿಲ್ ಹಾಸನ ಸ್ವಾಗತಿಸಿದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಪ್ರಸ್ತಾವಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಆಮಂತ್ರಣ ರಾಜ್ಯ ಸದಸ್ಯೆ ಸ್ವಾತಿ ಸೂರಜ್ ಶಿಶಿಲ ಓದಿದರು. ಆಮಂತ್ರಣ ರಾಜ್ಯ ಸದಸ್ಯೆ ಆಶಾ ಅಡೂರು ಧನ್ಯವಾದ ಸಲ್ಲಿಸಿದರು. ಶ್ವೇತಾ ಗೋಡ್ ಬೋಲೆ ಕನ್ಯಾಡಿ ಕಾರ್ಯಕ್ರಮ‌ ನಿರೂಪಿಸಿದರು. ಕವಿಗೋಷ್ಠಿಯ ಕಾರ್ಯಕ್ರಮ‌ ನಿರೂಒಣೆಯನ್ನು ರೇಣುಕಾ ಸುಧೀರ್ ಅರಸಿನಮಕ್ಕಿ ಮಾಡಿದರು. ಆಮಂತ್ರಣ ತಾಲೂಕು ಕೋಶಾಧಿಕಾರಿ ನಿರೀಕ್ಷಾ ನಂದಿಬೆಟ್ಟ ಧನ್ಯವಾದ ಸಲ್ಲಿಸಿದರು.

Related posts

ಮೊಬೈಲ್ ಕಳವಾದರೆ ವಾಟ್ಸಪ್ ನಲ್ಲಿ ಹಾಯ್ ಕಳುಹಿಸಿದರೆ ಪತ್ತೆಗೆ ಪ್ರಯತ್ನ

Suddi Udaya

ಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮಹಿಳಾ ಬ್ಯೂಟೀಪಾರ್ಲರ್ ಮತ್ತು ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಕಲ್ಲಿನ ಕೋರೆಗೂ ನನಗೂ ಸಂಬಂಧವಿಲ್ಲ ಬೆಳ್ತಂಗಡಿ ಮಾರಿ ಗುಡಿಯಲ್ಲಿ ಶಶಿರಾಜ್ ಶೆಟ್ಟಿ ಪ್ರಮಾಣ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

Suddi Udaya

ತೆಕ್ಕಾರು ಗ್ರಾ.ಪಂ. ನಿಂದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!