24.4 C
ಪುತ್ತೂರು, ಬೆಳ್ತಂಗಡಿ
April 4, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಭೆ

ಬೆಳ್ತಂಗಡಿ :ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಾಮಾನ್ಯ ಸಭೆಯು ಬೆಳ್ತಂಗಡಿಯ ಸಿವಿಸಿ ಸಭಾಂಗಣದಲ್ಲಿ ತಾಲೂಕು ಕಬ್ಬಡಿ ಅಮೆಚೂರು ಸಂಸ್ಥೆಯ ಅಧ್ಯಕ್ಷರಾದ ರಂಜನ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ, ಕಾರ್ಯಧ್ಯಕ್ಷರಾದ ರಾಜಶೇಖರ್ ಶೆಟ್ಟಿ,ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರಾನ್ಸಿಸ್ ವಿ ವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಕೀಮ್, ಉಪಾಧ್ಯಕ್ಷರಾದ ನಾಮದೇವ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಕಬಡ್ಡಿ ತೀರ್ಪುಗಾರ ಮಂಡಲ ಸಂಚಾಲಕರು ಹಾಗೂ ತಾಲೂಕು ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಪ್ರಭಾಕರ್ ನಾರಾವಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಜಯರಾಜ ಜೈನ್, ತಾಲೂಕು ಉಪಾಧ್ಯಕ್ಷರಾದ ವಿಜಯ ಗೌಡ ಸಂಸ್ಥೆಯ ಎಲ್ಲಾ ಸರ್ವ ಸದಸ್ಯರು ಭಾಗವಹಿಸಿರುತ್ತಾರೆ. ಸಭೆಯಲ್ಲಿ ಲೆಕ್ಕಪತ್ರ ಮಂಡಲ ಮಾಡಲಾಯಿತು. ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಶಾಸಕರಾದ ಹರೀಶ್ ಪೂಂಜರವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಬಡ್ಡಿ ಸಂಘಟನೆ ಬಗ್ಗೆ ಮತ್ತು ತಾಲೂಕು ಕಬ್ಬಡಿ ಚಾಂಪಿಯನ್ ಶಿಪ್ ಬಗ್ಗೆ ಚರ್ಚಿಸಲಾಯಿತು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ವಂದಿಸಿದರು.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಸೈಂಟ್ ಫ್ರಾನ್ಸಿಸ್ ಆಂ.ಮಾ. ಶಾಲೆಗೆ ಶೇ.100 ಫಲಿತಾಂಶ

Suddi Udaya

ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಬೆಳ್ತಂಗಡಿ ಶಾಂತಾ ಬಂಗೇರರವರಿಗೆ ಸನ್ಮಾನ

Suddi Udaya

ಗೇರುಕಟ್ಟೆ: ಸ್ನೇಹ ಸಂಗಮ ಆಟೋ-ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya
error: Content is protected !!