April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಳಂಜ: ಸ. ಉ. ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ನೇಮಮ್ಮ ಹಾಗೂ ಶ್ರೀಮತಿ ರೆನಿಲ್ಡಾ ಜೋಯ್ಸ್ ಮಥಾಯಸ್ ರವರಿಗೆ ಬೀಳ್ಕೊಡುಗೆ

ಬಳಂಜ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಳಂಜದಲ್ಲಿ ಸುಮಾರು 17 ವರ್ಷ 5 ತಿಂಗಳು ಸೇವೆ ಸಲ್ಲಿಸಿದ ಶಿಕ್ಷಕಿ ಶ್ರೀಮತಿ ನೇಮಮ್ಮ ರವರು ವರ್ಗಾವಣೆಗೊಂಡಿದ್ದು, ಹಾಗೆಯೇ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಮತಿ ರೆನಿಲ್ಡಾ ಜೋಯ್ಸ್ ಮಥಾಯಸ್ ರವರು ಸೇವಾ ನಿವೃತ್ತಿ ಹೊಂದಿದ್ದು, ಇವರಿಗೆ ನ. 28ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಿಕೆ, ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್, ಟ್ರಸ್ಟಿಗಳಾದ ಬಿ ಪ್ರಮೋದ್ ಕುಮಾರ್ ಮತ್ತು ವಿನು ಬಳಂಜ, ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ,ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜುನ ಆರ್ ನಿರೂಪಿಸಿ, ಮುಖ್ಯೋಪಾಧ್ಯಾಯರಾದ ರಂಗಸ್ವಾಮಿ ಸಿ ಆರ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಕೀರ್ತಿ ವಂದಿಸಿದರು. ಎಲ್ಲಾ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Related posts

ಅಳದಂಗಡಿ: ರಿಕ್ಷಾ ಮತ್ತು ಇನೋವಾ ಕಾರು ಮಧ್ಯೆ ಅಪಘಾತ ಪ್ರಯಾಣಿಕರಿಗೆ ಗಾಯ

Suddi Udaya

ಕೊಕ್ಕಡ ಗ್ರಾ.ಪಂ. ನಿಂದ ಬ್ಯಾಂಕ್ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ತುರ್ತು ಸಭೆ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ

Suddi Udaya

ಪುತ್ತೂರು ವಿವೇಕಾನಂದ ಕಾಲೇಜಿನ ನವಯುಗ ಕಾರ್ಯಕ್ರಮ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹದ ಪತ್ತೆ: ವಾರಸುದಾರರು ಧರ್ಮಸ್ಥಳ ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಲಾಯಿಲ ಹಾಗೂ ನಗರ ಮಹಾಶಕ್ತಿಕೇಂದ್ರದ ಸಭೆ

Suddi Udaya
error: Content is protected !!