September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆರ್ಕಿಡ್‌ ಪ್ರದರ್ಶನ:  ಧರ್ಮಸ್ಥಳದ  ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರಿಗೆ ಬಹುಮಾನ

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಆಯೋಜಿಸಿದ ಆರ್ಕಿಡ್ ಪ್ರದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಪ್ಯಾಫಿಯೋಪೆಡಿಲಮ್ ಆರ್ಕಿಡ್  ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.

ಕಳೆದ 5,6 ವರ್ಷಗಳಿಂದ ಆರ್ಕಿಡ್‌ ಗಿಡಗಳನ್ನು ಸಂಗ್ರಹಿಸಿಸುವ ಹವ್ಯಾಸ ಹೊಂದಿರುವ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ 
ಕುಮಾರ್ ಇದೇ ಮೊದಲ ಬಾರಿಗೆ  ಬೆಂಗಳೂರಿನಲ್ಲಿ ನಡೆದ ಆರ್ಕಿಡ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಬಹುಮಾನ ಪಡೆದ ಸಂಭ್ರಮದಲ್ಲಿ ಮಾತನಾಡಿದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ “ನಾನು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಸಾಮಾನ್ಯವಾಗಿ ಸ್ಲಿಪರ್‌ ಆರ್ಕಿಡ್ಸ್‌ ಎಂದು ಕರೆಯಲ್ಪಡುವ, ಲೇಡೀಸ್‌ ಶೂಸ್‌ನಂತೆ ಕಾಣುವ ವಿಶೇಷ ತಳಿ ಪ್ರಥಮ  ಸ್ಥಾನ ಪಡೆದುಕೊಂಡಿದೆ.  ಇದು ಆರ್ಕಿಡ್‌ಗಳಲ್ಲೇ ಪ್ರಮುಖವಾದುದಾಗಿದೆ. ನನ್ನ ಸಂಗ್ರಹದ ಕೆಲವು ಆರ್ಕಿಡ್‌ಗಳನ್ನು ಪ್ರದರ್ಶನ ಮಾಡಿ, ಇಲ್ಲಿನ ಶೋವನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದೆ. ಬಹುಮಾನ ದೊರೆತಿದ್ದು, ಅತೀವ ಸಂತೋಷವಾಗಿದೆ. ಮನೆಯವರನ್ನೂ ಕೂಡ ಈ ಆರ್ಕಿಡ್ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದೇನೆ” ಎಂದರು.

ಬೇರೆ ಬೇರೆ ಜಾತಿಯ 2500 ಹೆಚ್ಚು ಗಿಡಗಳ ಸಂಗ್ರಹ ಹೊಂದಿರುವ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಎಲ್ಲೇ 
ಹೋದರೂ ಗಿಡಗಳ ಬಗ್ಗೆ ಬಹಳ ಆಸಕ್ತಿ ತೋರುತ್ತಾರೆ. 

ಬೇರೆ -ಬೇರೆ ಕಡೆಗಳಿಗೆ ಭೇಟಿ ನೀಡಿದಾಗ ಹೊಸ ಹೊಸ ತಳಿಗಳನ್ನು ಗಿಡಗಳನ್ನು ಸಂಗ್ರಹಿಸುವುದು ಅವರ ಇಷ್ಟದ ಹವ್ಯಾಸ.

Related posts

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಬೆಳ್ತಂಗಡಿಯ ಹಿರಿಯ ಉದ್ಯಮಿ,ಕಲಾಪ್ರೇಮಿ, ಕೊಡುಗೈ ದಾನಿಗುರುವಾಯನಕೆರೆ ಹಂಸ ರೈಸ್ ಮಿಲ್ ಮಾಲಕ ಬಾಲಕೃಷ್ಣ ನಾಯಕ್ ವಿಧಿವಶ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಧರ್ಮಸ್ಥಳ ಹಾಗೂ ಶಿಶಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಸೇವಾ ನಿವೃತ್ತಿ

Suddi Udaya

ಉಜಿರೆ ಲಕ್ಷ್ಮೀ ಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ಸಾನಿಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಹಾಗೂ ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀ ಲಕ್ಷ್ಮೀ ಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲೆಗೆ ಹಿದಾಯತುಲ್ಲಾ ಗೇರುಕಟ್ಟೆ ರವರಿಂದ ಮಿಕ್ಸರ್ ಗ್ರೈಂಡರ್ ಕೊಡುಗೆ

Suddi Udaya
error: Content is protected !!