24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಮೇಘಾಲಯ ರಾಜ್ಯದ ಸಹಕಾರ ಇಲಾಖೆಯ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಯನಕ್ಕಾಗಿ 25 ಜನ ಸದಸ್ಯರ ಮೇಘಾಲಯ ರಾಜ್ಯದ ಸಹಕಾರಿ ಇಲಾಖೆಯ ಅಧಿಕಾರಿಗಳ ತಂಡವು ನ.28 ರಂದು ಬೇಟಿ ನೀಡಿತು.

ಈ ತಂಡದಲ್ಲಿ ಮೇಘಾಲಯ ರಾಜ್ಯದ ಸಹಕಾರಿ ಇಲಾಖೆಯ ಅಧಿಕಾರಿಗಳು ಇದ್ದರು.ತಂಡವು ಸಂಘದ ಕಿಲ್ಲೂರು ಹಾಗೂ ನಾವೂರು ಶಾಖೆಗೆ ಬೇಟಿಯನ್ನು ನೀಡಿತು.ಈ ಸಂದರ್ಭದಲ್ಲಿ ಸಂಘದ ಮುಖಾಂತರ ವಿತರಣೆಯಾಗುತ್ತಿರುವ ಸಾಲ ಯೋಜನೆಗಳು ಮತ್ತು ಸಂಘದ ಮುಖಾಂತರ ನಡೆಸುತ್ತಿರುವ ಮಾರಾಟ ವ್ಯವಹಾರಗಳ ಸಮಗ್ರವಾದ ಮಾಹಿತಿಯನ್ನು ಪಡೆದರು.ಹಾಗೂ ಕೇಂದ್ರ ಸರಕಾರ ಹಾಗೂ ನಬಾರ್ಡ್ ಯೋಜನೆಯಡಿಯಲ್ಲಿ ನಿರ್ಮಾಣವಾದ ಕಡಿರುದ್ಯಾವರ ಶಾಖೆಯ ವ್ಯವಹಾರದ ಮಾಹಿತಿಯನ್ನು ಪಡೆದರು.ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 1020.75 ಕೋಟಿ ವ್ಯವಹಾರವನ್ನು ನಡೆಸಿ. 5062 ಸದಸ್ಯರನ್ನು ಹೊಂದಿ,ರೂ 145 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಇದರಲ್ಲಿ 67.28 ಕೋಟಿಗೂ ಮಿಕ್ಕಿ ಕೃಷಿ ಸಾಲಗಳನ್ನು ವಿತರಿಸಲಾಗಿದೆ.2023-24 ನೇ ಸಾಲಿನಲ್ಲಿ 4.30 ಕೋಟಿ ಲಾಭಗಳಿಸಿದೆ.ಮತ್ತು 9.77 ಕೋಟಿ ಮಾರಾಟ ವ್ಯವಹಾರವನ್ನು ನಡೆಸಲಾಗಿದೆ.ಸಂಘವು ಪೂರ್ಣ ಪ್ರಮಾಣದ ಏಳು ಶಾಖೆಗಳನ್ನು ಹೊಂದಿದ್ದು, ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುತ್ತಿದೆ.ಈ ಎಲ್ಲಾ ವ್ಯವಹಾರಗಳ ಯಶಸ್ವಿ ಅನುಷ್ಟಾನದಿಂದ ನಬಾರ್ಡಿನ ಗಮನ ಸೆಳೆದಿದ್ದು, ಸಂಘದ ಯಶಸ್ವೀ ವ್ಯವಹಾರಕ್ಕೆ ಅಪೆಕ್ಸ್‌ ಬ್ಯಾಂಕಿನ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಮತ್ತು ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘವೇಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ನಬಾರ್ಡ್ ಸಂಸ್ಥೆಯ ಡಿ.ಡಿ.ಎಮ್ ಸತೀಶನ್ ಕರ್ತಾ,ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ದಯಾನಂದ ಶೆಟ್ಟಿಗಾರ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡ, ಶಾಖಾ ವ್ಯವಸ್ಥಾಪಕರುಗಳಾದ ಪ್ರಕಾಶ್ ಕುಮಾರ್, ರಮಾನಂದ.ಕೆ, ಚಂದ್ರಹಾಸ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಸಿಲಿಂಡರ್ ಸಾಗಾಟದ ಲಾರಿ ಮತ್ತು ಎಳನೀರು ಸಾಗಾಟದ ಟೆಂಪೋ ಮುಖಾಮುಖಿ ಡಿಕ್ಕಿ: ಚಾಮಾ೯ಡಿ ಘಾಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ಡಿ.10 -11: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

Suddi Udaya

ಧರ್ಮಸ್ಥಳ: ನಾರ್ಯ ನಿವಾಸಿ ಪ್ರಶಾಂತ್ ಗೌಡ ಅಸೌಖ್ಯದಿಂದ ನಿಧನ

Suddi Udaya

ಕುತ್ರೋಟ್ಟು ನಿವಾಸಿ ಫಯಾಜ್ ಸ್ಥಳೀಯ ಮಹಿಳೆ ಜೊತೆ ನಾಪತ್ತೆ ಶಂಕೆ: ಫಯಾಜ್ ನ ಪತ್ನಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು -ಪ್ರಕರಣ ದಾಖಲು

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಅಳದಂಗಡಿಯ ನಿಯತಿ ಯು. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya
error: Content is protected !!