ಧರ್ಮಸ್ಥಳ: ನ.26 ರಂದು ನಾಪತ್ತೆಯಾಗಿದ್ದ ಕಲ್ಲೇರಿಯ ನಿವಾಸಿ ಸುರೇಶ್ ಗೌಡ ((52 ವ) ರವರ ಮೃತ ದೇಹವು ಬಾವಿಯಲ್ಲಿ ಪತ್ತೆಯಾದ ಘಟನೆ ನ.29 ರಂದು ನಡೆದಿದೆ.

ಇವರು ಧರ್ಮಸ್ಥಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದೆ ತಾಯಿ ಮರಣ ಹೊಂದಿದ ನಂತರ ಮಾನಸಿಕ ಅಸ್ವಸ್ಥಗೊಂಡಿದ್ದ ಸುರೇಶ್ ರವರು ನ.26 ರಂದು ಸಂಜೆ ನಾಪತ್ತೆಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲಸದವರು ಹುಡುಕಾಟದಲ್ಲಿ ತೊಡಗಿಕೊಂಡಿದ್ದು, ನ. 29ರಂದು ಬೆಳಗ್ಗೆ ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಶವವನ್ನು ಮೇಲಕ್ಕೆತ್ತಿದ್ದು ಶೌರ್ಯ ತಂಡದ ಸ್ವಯಂಸೇವಕ ಮಾಸ್ಟರ್ ಸ್ನೇಕ್ ಪ್ರಕಾಶ್, ನಳಿನ್ ಕುಮಾರ್, ಸಚಿನ್ ಬೀಡೆ, ಸುಧೀರ್, ಅನಿಲ್ ಕಿರಣ್ ಗಿರೀಶ್ ಗೌಡ, ರಾಘವೇಂದ್ರ ಉಜಿರೆ ಜೊತೆಗಿದ್ದವರು
ಮೃತರು ಪತ್ನಿ ಹೇಮಲತಾ, ಮಕ್ಕಳಾದ ಪುನೀತ್, ಪ್ರಜ್ವಲ್ ಇವರನ್ನು ಅಗಲಿದ್ದಾರೆ.