24.7 C
ಪುತ್ತೂರು, ಬೆಳ್ತಂಗಡಿ
May 18, 2025
Uncategorizedಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿ

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ನ.29ರಂದು ಇಲ್ಲಿಯ ಅಮೃತವರ್ಷಿಣಿ ಸಭಾ ಭವನದಲ್ಲಿ ಆರಂಭಗೊಂಡ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಶ್ರೀ ಕ್ಷೇತ್ರೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರೀ ನಗರ ಬೆಂಗಳೂರಿನ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ವಹಿಸಿಕೊಂಡಿದ್ದಾರೆ. ‘ಹಿಂದೂ ಧಮ೯ ಹಾಗೂ ಸಮನ್ವಯ’ ಕುರಿತು,ಡಾ. ಜಿ.ಬಿ ಹರೀಶ ಸಂಶೋಧಕರು ಮತ್ತು ಸಂವಹನಕಾರರು ಬೆಂಗಳೂರು, ‘ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ‘ ಎಂಬ ವಿಷಯದಲ್ಲಿ
ಡಾ. ಜೋಸೆಫ್ ಎನ್.ಎಮ್ ನಿವೃತ್ತ ಪ್ರಾಂಶುಪಾಲರು ಮಡಂತ್ಯಾರು, ‘ ಇಸ್ಲಾಂ ಹಾಗೂ ಮಾನವತೆ ‘ ಎಂಬ ವಿಷಯದಲ್ಲಿ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಬಿಜಾಪುರ ಇವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೆ ಪಾತ್ರವಾದ ಮಂಜೂಷಾ ವಸ್ತು ಸಂಗ್ರಹಾಲಯದ ವೀಡಿಯೋ ಪ್ರದರ್ಶನ ಮಹತ್ವದ ಕುರಿತು ಪುಷ್ಫದಂತ ಕ್ಯುರೇಟರ್ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅನಾವರಣ ಗೊಳಿಸಲಾಯಿ.ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ನ ಮುಖ್ಯ ತೀರ್ಪುಗಾರರಾದ ಡಾ. ಪ್ರದೀಪ್ ಭಾರದ್ವಾಜ್ ಅವರನ್ನು ಗೌರವಿಸಲಾಯಿತು.

ಕು. ಶ್ರೀವಿದ್ಯಾ ಐತಾಳ್ ಇವರ ಪ್ರಾಥ೯ನೆ ಹಾಡಿದರು. ಬೆಂಗಳೂರು ಕ್ಷೀಮವನ ಕಾಯ೯ನಿವಾ೯ಹಕ ನಿರ್ದೇಶಕ ಶ್ರೀ ಮತಿ ಶ್ರದ್ಧಾ ಅಮಿತ್ ಹಾಗೂ ಎಸ್.ಡಿ.ಎಂ ಸನಿವಾಸ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು.ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ.ಸುರೇಂದ್ರ ಉಪನ್ಯಾಸಕರನ್ನು ಸನ್ಮಾನಿಸಿದರು.
ಉಜಿರೆ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ರುಡ್ಸೆಟ್ ಉಜಿರೆಯ ನಿರ್ದೇಶಕ ಅಜಯ್ ವಂದಿಸಿದರು.

ರಾತ್ರಿ ಶೀಜಿತ್ ಮತ್ತು ಪಾರ್ವತಿ ತಂಡ ಚೆನ್ಹೈ ‘ಭರತನಾಟ್ಯ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ಜರುಗಿತು.

Related posts

ಜಠರ ಮತ್ತು ಪಿತ್ತಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಕಾಶಿಪಟ್ಣದ ದೀಪಕ್ ಕೆ ಸಾಲ್ಯಾನ್ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಫೆ.2: ಸೌತಡ್ಕದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ಬೆಳ್ತಂಗಡಿ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ಹೊಳೆನರಸೀಪುರಕ್ಕೆ ವಗಾ೯ವಣೆ: ಕಡಬ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ರವರಿಗೆ ಅಧಿಕಾರ ಹಸ್ತಾoತರ

Suddi Udaya

ಲಾಯಿಲ: ಪಡ್ಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ: ಅಧ್ಯಕ್ಷರಾಗಿ ಹರ್ಷಿತ್ ನಿನ್ನಿಕಲ್ಲು, ಕಾರ್ಯದರ್ಶಿ ವಿನಯ್, ಕೋಶಾಧಿಕಾರಿ ಹರೀಶ್ ಎಲ್.ಆಯ್ಕೆ

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಹಲ್ಲೆ: ಪಂಚಾಯತ್ ಮೊಬೈಲ್ ಗೆ ಹಾನಿ, ದರೋಡೆ ಆರೋಪ: ಪಿಡಿಒ ದೂರಿನಂತೆ ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!