ಬೆಳ್ತಂಗಡಿ: ಇಲ್ಲಿನ ಪ್ರಸನ್ನ ಸಿ.ಬಿ.ಎಸ್.ಸಿ ಶಾಲೆಯಲ್ಲಿ ನ.28ರಂದು ವಾರ್ಷಿಕ ಕ್ರೀಡಾಕೂಟ ನೆರವೇರಿತು.

ಧ್ವಜಾರೋಹಣಗೈದು, ಕಾರ್ಯಕ್ರಮ ಉದ್ಘಾಟಿಸಿದ ಪ್ರಸನ್ನ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಅವರು, ಕ್ರೀಡೆ – ಮನಸ್ಸಿನ ಹುಮ್ಮಸ್ಸು ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದರು.


ವೇದಿಕೆಯಲ್ಲಿ ಪ್ರಸನ್ನ ವಿದ್ಯಾರ್ಥಿ ನಿಲಯದ ಪಾಲಕರಾದ ರಾಧೇಶ್ ಮತ್ತು ಗುಣಶ್ರೀ, ಸಿ.ಬಿ.ಎಸ್.ಸಿ ಶಾಲಾ ಆಡಳಿತಾಧಿಕಾರಿ ರಮ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಸಿರಿ ಚೇತನ್, ಸಂಜ್ಞಾ, ಸುಪ್ರೀತಾ, ಸುಜ್ಞಾ, ಸುಧೀಷ್ಣಾ, ಶ್ರೀಹಿತಾ ಪ್ರಾರ್ಥಿಸಿದರು. ಪ್ರಾಚಾರ್ಯ ಕೆ.ಎಸ್.ಎನ್. ಭಟ್ ಸ್ವಾಗತಿಸಿ, ಎಂ.ಕೆ ಕನ್ಯಾಡಿ ಧನ್ಯವಾದವಿತ್ತು, ಶಿಕ್ಷಕರುಗಳಾದ ಭಾರತಿ ಎನ್ ಮತ್ತು ಜಾನ್.ವಿ ನಿರೂಪಿಸಿದರು. ಕ್ರೀಡಾ ಮಂತ್ರಿ ಅಫ್ರಾಝ್ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.