ಬೆಳ್ತಂಗಡಿ: ಕ್ಯಾಂಪ್ಕೊ ನಿಯಮಿತ ಮಂಗಳೂರು. ಇದರ ” ಸಾಂತ್ವನ ” ಯೋಜನೆಯಡಿ ಬೆಳ್ತಂಗಡಿ ಶಾಖೆಯ ಸಕ್ರಿಯ ಸದಸ್ಯರಾದ, ಸಂಜೀವ ಶೆಟ್ಟಿ ಎಂ. ಮುಂಡಾಜೆ ಇವರ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಸಹಾಯಧನದ ಮೊತ್ತ, ರೂ. 1,52,000 /- ನ್ನು ಸಂಸ್ಥೆಯ ನಿರ್ದೇಶಕ ದಯಾನಂದ ಹೆಗ್ಡೆ ಯವರು ಬೆಳ್ತಂಗಡಿ ಶಾಖೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೈಕಂಪಾಡಿ ವಲಯದ ಮುಖ್ಯ ಮಾರುಕಟ್ಟೆ ಅಧಿಕಾರಿ ಗಿರೀಶ್ , ಶಾಖಾ ವ್ಯವಸ್ಥಾಪಕ ಶ್ರೀಕೃಷ್ಣ. ಕೆ. ಎಸ್. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.