32.1 C
ಪುತ್ತೂರು, ಬೆಳ್ತಂಗಡಿ
January 19, 2025
ತಾಲೂಕು ಸುದ್ದಿ

ಆದಿವಾಸಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರವರಿಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕಶೇಖರ್ ಲಾಯಿಲ ಅವರಿಂದಮನವಿ

  • ಆದಿವಾಸಿಗಳ ಕುಲ ಕಸುಬು ಉನ್ನತಿಗಾಗಿ, ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು
  • ಅಣಿಯೂರಿನಿಂದ ಕಾಟಾಜೆ -ಪರ್ಪಳ ಮೂಲಕ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಬೇಕು.

ಬೆಳ್ತಂಗಡಿ: ಆದಿವಾಸಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರವರಿಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ
ಶೇಖರ್ ಲಾಯಿಲ ಧಮ೯ಸ್ಥಳದಲ್ಲಿ
ಮನವಿ ಸಲ್ಲಿಸಿದರು.
ಈ ಜಿಲ್ಲೆಯ ಮೂಲ ನಿವಾಸಿ ಆದಿವಾಸಿಗಳು ಇಂದು ಹಲವಾರು ಗಂಭೀರ ಸ್ವರೂಪದ ಸಮಸ್ಯೆಗಳು ಸುಳಿಯಲ್ಲಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 77 ವರ್ಷ ಕಳೆಯುತ್ತಿದ್ದರೂ ಇನ್ನೂ ರಸ್ತೆ, ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜಮೀನು ರಹಿತರಾಗಿ, ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ ಜಮೀನಿನಲ್ಲಿ ಜೀವಿಸುವಂತಾಗಿದೆ. ಭೂಮಾಲೀಕರ ದೌರ್ಜನ್ಯ, ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಆದಿವಾಸಿಗಳ ಮೇಲೆ ಸುಳ್ಳು ಕೇಸ್ ಜಡಿದು ಬಾಯಿ ಮುಚ್ಚುವ ಕೆಲಸ ಕೂಡ ನಡೆಯುತ್ತಿದೆ.

ಆದಿವಾಸಿ ಸಮುದಾಯದ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಘನ ಸರ್ಕಾರ ಈಗಾಗಲೇ ಕಾರ್ ಯೋಜನೆ ರೂಪಿಸಿರುವುದು ಸ್ವಾಗತರ್ಹ, ಈ ಹಿನ್ನಲೆಯಲ್ಲಿ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮಗಳನ್ನು ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮನವಿಯಲ್ಲಿ ಏನಿದೆ..?:
1) ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಜನಾಂಗದವರು ವಾಸಿಸುವ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ವಿದ್ಯುತ್, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು

2) ಅರಣ್ಯ ಹಕ್ಕು ಕಾಯ್ದೆಯಡಿ ಆನ್‌ಲೈನ್ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು ಮತ್ತು ಆಥೈನ್ ಅರ್ಜಿ ಸಲ್ಲಿಸಲು ಅರಣ್ಯ ಹಕ್ಕು ಕಾಯ್ದೆಯನ್ನು ಸರಳೀಕೃತಗೊಳಿಸಬೇಕು.

3) ಶತಮಾನಗಳಿಂದ ಅರಣ್ಯ ಪ್ರದೇಶದಲ್ಲಿ ಕೃಷಿ, ಮನೆ ನಿರ್ಮಾಣ ಮಾಡಿಕೊಂಡಿರುವ ಆದಿವಾಸಿ ಜನಾಂಗದವರ ಜಮೀನನ್ನು ಸಕ್ರಮಗೊಳಿಸಬೇಕು ಅರಣ್ಯ ಪರಂಬೊಕು ಪ್ರದೇಶದಲ್ಲಿ ವಾಸಿಸುವ ಆಗಿವಾಸಿಗಳ ಜಮೀನನ್ನು ಅಕ್ರಮ-ಸಕ್ರಮ ಯೋಜನೆಯಲ್ಲಿ ಮಂಜೂರು ಮಾಡಬೇಕು.
4) ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ಕಾಲನಿಯಲ್ಲಿ ವಾಸಿಸುವ 47 ಕುಟುಂಬಗಳಿಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯ 9 ತಿರುವು ಮೂಲಕ 9 ಕಿಮೀ ದೂರದ ಮಣ್ಣಿನ ರಸ್ತೆಯ ಮೂಲಕ ಖಾಸಗಿ ಎಸ್ಟೇಟ್ ಮೂಲಕ ಪ್ರಯಾಣಿಸಬೇಕಾಗಿದೆ. ಚಾರ್ಮಾಡಿ ಘಾಟಿ ಕುಸಿತ, ಅಪಘಾತದ ಸಂದರ್ಭದಲ್ಲಿ ಈ ಮಲೆಕುಡಿಯ ಕಾಲನಿಯ ನಿವಾಸಿಗಳಿಗೆ ದಿಗ್ವಂದನ ತಪ್ಪಸಲು ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ -ಪರ್ಪಳ ಮೂಲಕ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಬೇಕು.

5) ಬೆಳ್ತಂಗಡಿ ತಾಲೂಕಿನ ಆದಿವಾಸಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು.

6) ಬೆಳ್ತಂಗಡಿ ತಾಲೂಕಿನಲ್ಲಿರುವ ಆಶ್ರಮ ಶಾಲೆಗಳನ್ನು ಉನ್ನತೀಕರಣಗೊಳಿಸಬೇಕು ಮತ್ತು ಪ್ರೌಡ ಶಿಕ್ಷಣಕ್ಕೆ ಮೇಲ್ದರ್ಜೆಗೆ ಏರಿಸಬೇಕು.

7) ನೆರಿಯ ಗ್ರಾಮದ ಆಲಂಗಾಯಿ ಮಲೆಕುಡಿಯ ಸಮುದಾಯದ ಕಾಲನಿಯ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯಕ್ಕಾಗಿ ಈಗಾಗಲೇ ಆರಂಬಿಸಿರುವ ಕಾಮಗಾರಿಯನ್ನ ತಕ್ಷಣ ಪೂರ್ಣಗೊಳಿಸಬೇಕು.

8) ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ಕಾಲನಿಯ ನಿವಾಸಿಗಳ ಜಮೀನಿನ ಮೇಲೆ ರಾಜ್ಯ ಹೈಕೋರ್ಟ್‌ನಲ್ಲಿ ಹೂಡಿರುವ ಮೊಕದ್ದಮೆಯನ್ನು ವಾಪಸು ಪಡೆಯಬೇಕು. ಸರ್ಕಾರ ಮಲೆಕುಡಿಯ ಸಮುದಾಯದ ಜಮೀನಿನ ಮೇಲೆ ಮೊಕದ್ದಮೆ ಹೂಡುವ ಮೂಲಕ ಮಲೆಕುಡಿಯದ ಮೂಲಸ್ಥಾನದಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸಿರುವುದು ಸರಿಯಲ್ಲ. ಯೆನಪೋಯ ಎಸ್ಟೇಟ್ ಮತ್ತು ರಾಜ್ಯ ಸರ್ಕಾರದ ನಡುವಿನ ಜಮೀನಿನ ವ್ಯಾಜ್ಯದಿಂದ ಬಾಂಜಾರು ಮಲೆಕುಡಿಯ ಸಮುದಾಯದ ಜಮೀನನ್ನು ಕೈ ಬಿಡಬೇಕು.

9) ತಾಲೂಕಿನಲ್ಲಿರುವ ಆದಿವಾಸಿ ಸಮುದಾಯ ಮಲೆಕುಡಿಯ, ಕೊರಗ, ಮರಾಠಿ ನಾಯ್ಕ ಸಮುದಾಯದ ಕಾಲನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮರಾಠಿ ನಾಯ್ಕ ಸಮುದಾಯಕ್ಕೂ ಪೌಷ್ಟಿಕಾಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು.

10) 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿ ಮಾಡಲು ವಿಫಲವಾಗಿರುವ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

11) ಆದಿವಾಸಿ ಸಮುದಾಯ ವಾಸಿಸುವ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣದಲ್ಲಿ ಜಮೀನು ಕಾಯ್ದಿರಿಸಿ, ಸಮುದಾಯ ಭವನ ನಿರ್ಮಾಣ ಮಾಡಬೇಕು.

12) ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನಾದಿಕಾಲದಿಂದಲೂ ಇರುವ ರಸ್ತೆಗಳನ್ನು ದುರಸ್ತಿ ಮಾಡಲು ವನ್ಯಜೀವಿ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದ್ದು, ಆದರೆ ಆದಿವಾಸಿಗಳು ವಾಸಿಸದ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಯಂತ್ರಗಳ ಸಹಾಯದಿಂದ ಅಕ್ರಮ, ಅನಧಿಕೃತವಾಗಿ ರಸ್ತೆಗಳನ್ನು ನಿರ್ಮಿಸುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

13) ಬೆಳ್ತಂಗಡಿ ತಾಲೂಕಿನಲ್ಲಿರುವ ಆದಿವಾಸಿ ಗುಡಿಸಲು ವಾಸಿಗಳನ್ನು ಸರ್ವೆ ನಡೆಸಬೇಕು ಮತ್ತು ಸುಸಜ್ಜಿತ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು.

14) ಆಶ್ರಮ ಶಾಲೆಗಳಲ್ಲಿರುವ ಅಧ್ಯಾಪಕರನ್ನು, ಸಿಬ್ಬಂದಿಗಳನ್ನು ಖಾಯಂಗೊಳಿಸಬೇಕು.

15) ಕಾಡುತ್ಪತ್ತಿ ಸಂಗ್ರಹಿಸಲು ಆದಿವಾಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.

16) ಆದಿವಾಸಿಗಳ ಕುಲ ಕಸುಬು ಉನ್ನತಿಗಾಗಿ, ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು.

17) ಉನ್ನತ ಶಿಕ್ಷಣ ಪಡೆಯುವ ಆದಿವಾಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಜಿಲ್ಲಾ ಕೇಂದ್ರದಲ್ಲಿ ಪುರುಷ/ ಮಹಿಳಾ ಹಾಸ್ಟೆಲ್ ತೆರೆಯಬೇಕು.

18) ಕಸ್ತೂರಿರಂಗನ್ ವರದಿ, ಪಶ್ಚಿಮ ಘಟ್ಟ ಸೂಕ್ಷ್ಮ ವಲಯ, ಪುಷ್ಪಗಿರಿ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್, ಹುಲಿ ಸಂರಕ್ಷಣಾ ವಲಯವನ್ನು ಕೈ ಬಿಡಬೇಕು. ಕಾಯ್ದೆ, ಯೋಜನೆಗಳ ಹೆಸರಿನಲ್ಲಿ ಆದಿವಾಸಿಗಳ ಒಕ್ಕಲೇಬ್ಬಿಸ ಬಾರದು. మత్తు మూలభూత య౯గళ అభివృద్ధిగ
ಅಡ್ಡಿಪಡಿಸಬಾರದು.
19) ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತಕ್ಷಣ ಇತ್ಯರ್ಥ ಮಾಡಬೇಕು ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರುಗೊಂಡಿರುವ ಜಮೀನಿನ ಪಹಣಿ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.

20) ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ಹುದ್ದೆಗೆ ಪೂರ್ಣ ಪ್ರಮಾಣದ ಅಧಿಕಾರಿಗಳನ್ನು ನೇಮಿಸಬೇಕು.

21) ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆದಿವಾಸಿ ಸಮುದಾಯಕ್ಕೆ ಉದ್ಯೋಗದ ವಿಶೇಷ ಮೀಸಲಾತಿ ಕಲ್ಪಿಸಬೇಕು. ಈಗಾಗಲೇ ದುಡಿಯುತ್ತಿರುವ ಮಲೆಕುಡಿಯ ಸಮುದಾಯದ ಸಿಬ್ಬಂದಿಗಳನ್ನು ಖಾಯಂ ಮಾಡಬೇಕು.

22) ದ.ಕ ಜಿಲ್ಲೆಯಲ್ಲಿ ಪ.ಜಾತಿ/ಪಂಗಡಗಳಿಗೆ ಮೀಸಲಾಗಿರುವ DCಮನ್ನಾ ಜಮೀನನ್ನು ಅರ್ಹರಿಗೆ ಹಂಚಲು ಕ್ರಮ ಕೈಗೊಳ್ಳಬೇಕು ಒತ್ತುವರಿ ಅತಿಕ್ರಮೇಣಗೊಳಗಾಗಿರುವ DC ಮನ್ನಾ ಜಮೀನನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

Related posts

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಸ್ಪಂದನ ಬಂಟರ ಸೇವಾ ತಂಡದ 25ನೇ ಸೇವಾ ಕಾರ್ಯಕ್ರಮ: 25 ಕುಟುಂಬಗಳಿಗೆ ಸಹಾಯಧನ ವಿತರಣೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಣೆ

Suddi Udaya

ಬೆಳ್ತಂಗಡಿ ಭಾರತ ಮಾತಾ ಪೂಜಾ ಸಮಿತಿಯಿಂದ ರಾಷ್ಟ್ರದೇವೋಭವ ಕಾರ್ಯಕ್ರಮ

Suddi Udaya

ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ: ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಎಮ್ಎಸ್

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!