ಕಲ್ಲೇರಿ :ತೋಟಗಾರಿಕೆ ಇಲಾಖೆ ಜಿ. ಪಂ ಬೆಳ್ತಂಗಡಿ, ನವಚೇತನ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ(ನಿ)ಕಲ್ಲೇರಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಇವರ ಸಹಭಾಗಿತ್ವದಲ್ಲಿ ತೋಟಗಾರಿಕೆ ಇಲಾಖೆ 2024-25 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನ. 30ರಂದು ನವಚೇತನ ತೋಟಗಾರಿಕೆ ರೈತ ಉತ್ಪಾದಕ ಕಂಪನಿ(ನಿ)ಸಭಾಭವನ, ಕಲ್ಲೇರಿಯಲ್ಲಿ ಜರಗಿತು.

ಗ್ರಾ.ಪಂ. ತಣ್ಣೀರುವಂತ ಅಧ್ಯಕ್ಷೆ ಹೇಮಾವತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಮಂಗಳೂರು ತೋಟಗಾರಿಕೆ ಉಪನಿರ್ದೇಶಕರು ಮಂಜುನಾಥ್, ನವಚೇತನ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ(ನಿ) ಕಚೇರಿ ಅಧ್ಯಕ್ಷ ಲಿಂಗಪ್ಪ ನಾಯ್ಕ, ಉಪಾಧ್ಯಕ್ಷ ಪುರಂದರ ಗೌಡ, ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಿಯಾ ಹಾಗೂ ಸದಸ್ಯರು ನವಚೇತನ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಯ ನಿರ್ದೇಶಕರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಭವಿಷ್ಯ ವಿಜ್ಞಾನಿಗಳು ಸಿ. ಪಿ. ಸಿ. ಆರ್. ವಿಟ್ಲ., ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ
ಚಂದ್ರಶೇಖರ್, ತೋಟಗಾರಿಕಾ ಅಧಿಕಾರಿ ಕೊಕ್ಕಡ ಹೋಬಳಿ ಮಲ್ಲಿಕಾನಾಥ್ ಬಿರಾದಾರ್, ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾವೀರ ಶೇಕ್ ನವರ್ ಮಾಹಿತಿ ನೀಡಿದರು.