ಕುವೆಟ್ಟು ರಾಷ್ಟ್ರೀಯ ಹೆದ್ದಾರಿಯ ಕೆಲಸ ಕಾಮಗಾರಿ ನಡೆಯುತ್ತಿದ್ದು ಮದ್ದಡ್ಕ ಮಸೀದಿ ಮತ್ತು ಹಾಲಿನ ಡಿಪ್ಪೊದ ಮುಂಭಾಗದಲ್ಲಿ ಮಾರ್ಗವನ್ನು ಬಹಳ ಎತ್ತರವಾಗಿಸಿದ್ದರಿಂದ ಈ ಪರಿಸರದಲ್ಲಿ ಮನೆಗಳಿಗೆ ಅoಗಡಿಗಳ ವ್ಯಾಪಾರಕ್ಕೆ ಜನರಿಗೆ ತೊoದರೆಯಾಗದoತೆ ಮಾರ್ಗವನ್ನು ತಗ್ಗಿಸಿ ಕಾಮಗಾರಿ ನಡೆಸುವoತೆ ಮದ್ದಡ್ಕ ಚಿಲಿಂಬಿ ಪರಿಸರದವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಚಿಲಿಂಬಿ ಪರಿಸರದ ಪ್ರಮುಖರಾದ ಅಶ್ರಫ್ ಚಿಲಿಂಬಿ, ಸಿರಾಜ್ ಚಿಲಿಂಬಿ, ರಘು ಶೆಟ್ಟಿ, ಇಲಿಯಾಝ್ ಚಿಲಿಂಬಿ, ರಕ್ಷಿತ್, ಇಕ್ಬಾಲ್ ಟಿಕ್ಕ, ಹಸನಬ್ಬ ಎಚ್ ಎಮ್, ಸಮೀರ್ ಎಸ್ ಬಿ, ದಾವೂದ್ ಮಟನ್ , ಹಮೀದ್ ಚಿಲಿಂಬಿ ಉಪಸ್ಥಿತರಿದ್ದರು.