ಬಜಿರೆ: ಹೊಸಪಟ್ಣ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಹಾಗೂ ಸತ್ಯನಾರಾಯಣ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಕ್ಲಬ್‌ನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಸಹಾಯಾರ್ಥವಾಗಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಇದರ ಸಹಯೋಗದಲ್ಲಿ ಹೊನಲುಬೆಳಕಿನ ಪುರುಷರ 60 ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ಹೊಸಪಟ್ಣ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ವಠಾರದಲ್ಲಿ ನ.30ರಂದು ಜರುಗಿತು.
ಉದ್ಘಾಟನೆಯನ್ನು ಬಂಟ್ವಾಳ ಮಾಜಿ ಶಾಸಕರು ರಮಾನಾಥ ರೈ ನೆರವೇರಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ವಹಿಸಿ ಶುಭಹಾರೈಸಿದರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉದ್ಯಮಿ
ಜಗದೀಶ್ ಎನ್.,, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ, ಎಂ. ತುಂಗಪ್ಪ ಬಂಗೇರ, ಅಳದಂಗಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಧರ್ಮಸ್ಥಳ, ಭಾ. ಜ. ಪಾ. ದ. ಕ. ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಬೆಳ್ತಂಗಡಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮುಖ್ಯ ತೀರ್ಪುಗಾರ ಪ್ರಭಾಕರ ನಾರಾವಿ, ವೇಣೂರು ಮೆಸ್ಕಾಂ ಇಲಾಖೆಯ ಮುಸ್ತಾಫ, ವಿಸ್ತಾರ ಡಿಜಿಟಲ್ ಮಾಧ್ಯಮದ ನಿರೂಪಕಿ ಕು. ರಕ್ಷಾ ಜಾರಿಗೆದಡಿ, ನುರಿತ ಮರದ ಕೆತ್ತನೆಗಳ ಶಿಲ್ಪಿ ಮತ್ತು ಕಂಬಳ ಓಟಗಾರ ವಿಶ್ವನಾಥ ಆಚಾರ್ಯ ಹಿದ್ದೆಕ್ಯಾರು, ರಾಷ್ಟ್ರಮಟ್ಟದ ಮಹಿಳಾ ಕಬಡ್ಡಿ ಆಟಗಾರ್ತಿ ಕು| ಅನನ್ಯ ಆನಂದ ಪೂಜಾರಿ, ಕಂಬಳ ಓಟದ ಕೋಣಗಳ ಯಜಮಾನ ಗಣೇಶ್ ನಾರಾಯಣ ಪಂಡಿತ್, ಜನಪ್ರಿಯ ಪಶು ಚಿಕಿತ್ಸಕ ಪ್ರದೀಪ್ ಶೆಟ್ಟಿ, ಯಕ್ಷಗಾನ ಕಲಾವಿದ ಸತೀಶ್ ನಯನಾಡು, ಕಿರುತೆರೆಯ ಖ್ಯಾತ ನೃತ್ಯ ಕಲಾವಿದೆ ಕು| ಆಪ್ತಿ ಪೂಜಾರಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಶಾಂತ್ ಶೆಟ್ಟಿ, ಸಿ.ಎ. ಇಂಟರ್ ಮಿಡಿಯೇಟ್ ರ್‍ಯಾಂಕ್ ವಿದ್ಯಾರ್ಥಿ ದೀಪಕ್ ಹೆಗ್ಡೆ ಇವರನ್ನು ಗೌರವಿಸಲಾಯಿತು.
ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ರೂ. ೧೫,೫೫೫/- ಹಾಗೂ ಶ್ರೀ ಸತ್ಯನಾರಾಯಣ ಟ್ರೋಫಿ, ದ್ವಿತೀಯ ರೂ. ೧೦,೫೫೫/- ಹಾಗೂ ಟ್ರೋಫಿ, ತೃತೀಯ ರೂ. ೫,೫೫೫/- ಹಾಗೂ ಟ್ರೋಫಿ, ಚತುರ್ಥ ರೂ. ೫,೫೫೫/- ಹಾಗೂ ಟ್ರೋಫಿ. ಹಾಗೂ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ ಆಟಗಾರ ಹಾಗೂ ಕ್ವಾಟರ್ ಫೈನಲ್ ಪ್ರವೇಶಿಸಿದ ತಂಡಕ್ಕೂ ಶಾಶ್ವತ ಟ್ರೋಫಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಕುಡ್ಮೇರು, ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ, ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯದರ್ಶಿ ಮೋಹನ್ ಬಿ.ಸಿ ಹೊಸಪಟ್ಣ ಕ್ರೀಡಾಕೂಟದ ಪದಾಧಿಕಾರಿಗಳಾದ ಪ್ರಧಾನ ಕ್ರೀಡಾ ಸಂಚಾಲಕ ಭಾಸ್ಕರ ಪೂಜಾರಿ, ನಾಯರ್‌ಮೇರ್, ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಗ್ರಾ.ಪಂ. ಸದಸ್ಯರಾದ ಕೆ. ಲೋಕಯ್ಯ ಪೂಜಾರಿ ಕಂಗಿತ್ತಿಲು, ಸುನಿಲ್ ಪೂಜಾರಿ ಪುಣ್ಯದಡಿ, ಹೊಸಪಟ್ಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಕಜಿಪಟ್ಟ, ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.