24.8 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ| ಫಾ. ಅಬ್ರಹಾಂ ಪಟ್ಟೇರಿ ರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ಫಾ. ಅಬ್ರಹಾಂ ಪಟ್ಟೇರಿ ಅವರು ತಮ್ಮ ಯಾಜಕಾಭಿಷೇಕದ ರಜತ ಸಂಭ್ರಮದ ಹೊಸ್ತಿಲಲ್ಲಿ ನಿಲ್ಲುತ್ತಿದ್ದು, ಈ ತಿಂಗಳ 28ರಂದು 25 ವರ್ಷಗಳ ಯಶಸ್ವೀ ಯಾಜಕ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ. ಉಡುಪಿ ಜಿಲ್ಲೆ ಮುದೂರು, ಬೈಂದೂರು ತಾಲ್ಲೂಕಿನ ಕಲ್ಮಕ್ಕಿ, ಹಾಗೂ ಬೆಳ್ತಂಗಡಿ ಬೆದ್ರಬೆಟ್ಟು ಚರ್ಚುಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಕಳೆದ 14 ವರ್ಷಗಳಿಂದ ಧರ್ಮಪ್ರಾಂತ್ಯದ ಹಣಕಾಸು ಅಧಿಕಾರಿ ಸ್ಥಾನದಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ.

ಅಕ್ಷರ ಮತ್ತು ಆಹಾರ ದಾಸೋಹದ ಮೂಲಕ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯ ವ್ಯಕ್ತಿತ್ವವನ್ನು ಫಾ. ಪಟ್ಟೇರಿ ಹೊಂದಿದ್ದಾರೆ ಎಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ವಂದನೀಯ ಫಾ. ಶಾಜಿ ಮಾತ್ಯು ಶುಭಾಶಯ ಸಂದೇಶದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ಶಿಬು, ಜೋಬಿನ್, ಅಲೆಕ್ಸ್, ಅಲ್ಬಿನ್, ಲೆಕ್ಕಪರಿಶೋಧಕ ಸುರೇಶ್, ಕಾರ್ಯದರ್ಶಿ ಶ್ರೀಮತಿ ಜೆಸ್ಸಿ ಕೆ.ಜೆ., ವಂದನೀಯ ಭಗಿನಿ ಸಿಸ್ಟರ್ ಲಿಸ್ ಮಾತ್ಯು, ಮತ್ತು ರೊಯ್ ಉಪಸ್ಥಿತರಿದ್ದರು.

Related posts

ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ

Suddi Udaya

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ಕಲ್ಲೇರಿ: ಪಂಜಿಕುಡೇಲು ನಿವಾಸಿ ಸುಂದರ ಕೋಟ್ಯಾನ್ ನಿಧನ

Suddi Udaya

ದ.ಕ ಜಿ.ಪಂ. ನೂತನ ಸಿಇಒ ವಿನಾಯಕ್ ಕರ್ತವ್ಯಕ್ಕೆ ಹಾಜರು

Suddi Udaya

ಇಳಂತಿಲ :ಶ್ರೀ ಕೇಶವ ಶಿಶು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1 ಲಕ್ಷ ನೆರವು

Suddi Udaya
error: Content is protected !!