ಕುವೆಟ್ಟು : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಓಡಿಲ್ನಾಳ, ಕುವೆಟ್ಟು ಗ್ರಾಮ ಸಮಿತಿಯ ವಾರ್ಷಿಕ ಮಹಾ ಸಭೆಯು ಡಿ.1 ರಂದು ಕರ್ನಂತೋಡಿ ಚೆನ್ನಪ್ಪ ಗೌಡರ ಮನೆಯಲ್ಲಿ ನಡೆಯಿತು.
ಈ ವೇಳೆ ಇತ್ತೀಚೆಗೆ ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ ಪಡೆದ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಲಕ್ಷ್ಮೀನಾರಾಯಣರವರಿಗೆ ಗ್ರಾಮ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಕ್ರೀಡೋತ್ಸವವು ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರು, ಗೌರವ ಸಲಹೆಗಾರ ಚೆನ್ನಪ್ಪ ಗೌಡ ಕರ್ನಂತೋಡಿ, ಪುರಂದರ ಗೌಡ, ಶ್ರೀಮತಿ ಮಮತ, ಪದಾಧಿಕಾರಿಗಳು ಉಪಸ್ಥಿತರಿದ್ದರು.