ಬೆಳ್ತಂಗಡಿ : ಮಡಿಕೇರಿಯ ಗೋಣಿಕೊಪ್ಪದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.
ವಲಯದ ಅತ್ಯುತ್ತಮ ಛೇoಬರ್ (ಲೀಜನ್) ಪ್ರಶಸ್ತಿ, ವಲಯದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ, ವಲಯದ ಅತ್ಯುತ್ತಮ ಫೌಂಡೇಶನ್ ಕಾಂಟ್ರಿಬುಷನ್ ಪ್ರಶಸ್ತಿ, ಛೇoಬರಿನ ಸದಸ್ಯತ್ವ ಆಂತರಿಕ ಪ್ರಗತಿ ಪ್ರಶಸ್ತಿ ಲಭಿಸಿದೆ.
ಈ ಸಂದರ್ಭದಲ್ಲಿ ಛೇoಬರಿನ ಅಧ್ಯಕ್ಷ ವಾಲ್ಟರ್ ಸಿಕ್ವೇರಾ, ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ, ಪೂರ್ವಧ್ಯಕ್ಷರಾದ ಪ್ರಮೋದ್ ಆರ್ ನಾಯಕ್, ಲ್ಯಾನ್ಸಿ ಪಿರೇರಾ, ಕೋಶಾಧಿಕರಿ ಪುಷ್ಪರಾಜ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್ ರೈ, ಬಾನುಪ್ರಸನ್ನ, ದಯಾನಂದ, ಅಶೋಕ ಬಿ, ಜಯಾನಂದ ಗೌಡ, ಸಂತೋಷ್ ಹೆಗ್ಡೆ, ತುಕಾರಾಮ್ ಬಿ ಒಟ್ಟು 12 ಸದಸ್ಯರು ಭಾಗವಹಿಸಿದರು.