ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷಿಯಿಂದ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಗೆ ರೂ.31 ಸಾವಿರ ಹಸ್ತಾಂತರ ಮಾಡಲಾಯಿತು. ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಹಾಗೂ ಟ್ರಸ್ಟ್ ಸದಸ್ಯರು ಮೊತ್ತ ಸ್ವೀಕರಿಸಿದರು.
ಕಳೆದ ಒಂದು ವಾರದ ಹಿಂದೆ ಲತೇಶ್ ಪೆರಾಜೆ ಹಾಗೂ ಪ್ರಣಾಮ್ ಶೆಟ್ಟಿ ನೇತೃತ್ವದಲ್ಲಿ ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ನಿಶಾಂತ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು ರೂ 61 ಸಾವಿರ ಮೊತ್ತ ಉಳಿಕೆಯಾಗಿತ್ತು. ಅದರಲ್ಲಿ ರೂ.31 ಸಾವಿರ ಬಳಂಜ ಶಾಲೆಗೆ ಹಾಗೂ ಉಳಿಕೆ ಮೊತ್ತವನ್ನು ಅಶಕ್ತ ಕುಟುಂಬಗಳಿಗೆ ಹಸ್ತಾಂತರಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು, ಮುಖ್ಯೋಪಾಧ್ಯರು, ಶಿಕ್ಷಕರು, ಅಟ್ಲಾಜೆ ಕ್ರಿಕೆಟರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.