ನಾಳ ಪರಿಸರದಲ್ಲಿ ಪ್ರಥಮ ಬಾರಿಗೆ ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಡಿ.1 ರಂದು ತಿವ ಡ್ಯಾನ್ಸ್ ಕ್ಲಾಸ್ ಉದ್ಘಾಟನೆಗೊಂಡಿರುತ್ತದೆ.
ಸಮಾರಂಭದ ಅಧ್ಯಕ್ಷತೆಯನ್ನು ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಮಜಲು ವಹಿಸಿ ಪುಟಾಣಿ ಜನಿಶಾಳೊಂದಿಗೆ ದೀಪವನ್ನು ಬೆಳಗಿಸಿದರು.
ಅತಿಥಿಗಳಾಗಿ ನಾಳ ಹಾ. ಉ. ಸ. ಸಂ ನಿರ್ದೇಶಕರಾದ ಸೋಮಪ್ಪಗೌಡ , ಶ್ರೀಮತಿ ರೀತ ಚಂದ್ರಶೇಖರ್, ಗೀತಾ, ಉಷಾ, ಜಯಚಂದ್ರ ಗೌಡ, ಹಾ. ಉ. ಸ. ಸಂಘದ ಸಿಬ್ಬಂದಿಗಳಾದ ಸೌಮ್ಯ, ವೆಂಕಪ್ಪ ಪೂಜಾರಿ, ಸವಿತಾ ಭಾಗವಹಿಸಿದ್ದರು.
ನಾಟ್ಯ ಗುರು ಸುಸ್ಮಿತ ಸ್ವಾಗತಿಸಿದರು.