December 5, 2024
ತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ| ಫಾ. ಅಬ್ರಹಾಂ ಪಟ್ಟೇರಿ ರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ಫಾ. ಅಬ್ರಹಾಂ ಪಟ್ಟೇರಿ ಅವರು ತಮ್ಮ ಯಾಜಕಾಭಿಷೇಕದ ರಜತ ಸಂಭ್ರಮದ ಹೊಸ್ತಿಲಲ್ಲಿ ನಿಲ್ಲುತ್ತಿದ್ದು, ಈ ತಿಂಗಳ 28ರಂದು 25 ವರ್ಷಗಳ ಯಶಸ್ವೀ ಯಾಜಕ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ. ಉಡುಪಿ ಜಿಲ್ಲೆ ಮುದೂರು, ಬೈಂದೂರು ತಾಲ್ಲೂಕಿನ ಕಲ್ಮಕ್ಕಿ, ಹಾಗೂ ಬೆಳ್ತಂಗಡಿ ಬೆದ್ರಬೆಟ್ಟು ಚರ್ಚುಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಕಳೆದ 14 ವರ್ಷಗಳಿಂದ ಧರ್ಮಪ್ರಾಂತ್ಯದ ಹಣಕಾಸು ಅಧಿಕಾರಿ ಸ್ಥಾನದಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ.

ಅಕ್ಷರ ಮತ್ತು ಆಹಾರ ದಾಸೋಹದ ಮೂಲಕ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯ ವ್ಯಕ್ತಿತ್ವವನ್ನು ಫಾ. ಪಟ್ಟೇರಿ ಹೊಂದಿದ್ದಾರೆ ಎಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ವಂದನೀಯ ಫಾ. ಶಾಜಿ ಮಾತ್ಯು ಶುಭಾಶಯ ಸಂದೇಶದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ಶಿಬು, ಜೋಬಿನ್, ಅಲೆಕ್ಸ್, ಅಲ್ಬಿನ್, ಲೆಕ್ಕಪರಿಶೋಧಕ ಸುರೇಶ್, ಕಾರ್ಯದರ್ಶಿ ಶ್ರೀಮತಿ ಜೆಸ್ಸಿ ಕೆ.ಜೆ., ವಂದನೀಯ ಭಗಿನಿ ಸಿಸ್ಟರ್ ಲಿಸ್ ಮಾತ್ಯು, ಮತ್ತು ರೊಯ್ ಉಪಸ್ಥಿತರಿದ್ದರು.

Related posts

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಉ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿ: ಆರು ಮಂದಿಗೆ‌ ಗಾಯ- ಗಂಭೀರ ಗಾಯಗೊಂಡ‌ ಯುವಕ ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ಉಜಿರೆ ಶ್ರೀ ಧ.ಮಂ. ಅ. ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ‘ಪ್ರಾರಂಭೋತ್ಸವ’

Suddi Udaya

ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರರಾದ ಕೊಕ್ಕಡದ ಶ್ರೀಧರ ಗೌಡ ಕೆಂಗುಡೇಲುರವರಿಗೆ “ವಿಕ ಹಿರೋಸ್” ಪ್ರಶಸ್ತಿ

Suddi Udaya

ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು, ಆಹಾರ- ಔಷಧ ಕಿಟ್ ವಿತರಣೆ

Suddi Udaya

ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya
error: Content is protected !!