December 5, 2024
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.30ರಂದು ವಾರ್ಷಿಕ ಕ್ರೀಡಾಕೂಟವು ನೆರವೇರಿತು. ಕ್ರೀಡಾಕೂಟವನ್ನು ಪ್ರಾರ್ಥನಾ ಗೀತೆಯನ್ನು ಹಾಡಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿಲ್ವೋನಿಯಾ ಪಾಯಸ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಪಥ ಸಂಚಲನವನ್ನು ಮಾಡಿ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯು ಮಕ್ಕಳ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿ ,ಮಕ್ಕಳಿಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಲ್ವೋನಿಯಾ ಪಾಯಸ್ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಎಲ್ಲರಿಗೂ ಅಂಥ ಅವಕಾಶಗಳು ಸಿಗುವುದಿಲ್ಲ ಎಂದು ಹೇಳಿ, ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೋ ಡೇಸರವರು, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಸ್ ರವರು, ಪುಂಜಾಲಕಟ್ಟೆ ವಲಯದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಚೇತನರವರು ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಡಿಸೋಜರವರು, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೂರಜ್ ಚಾರ್ಲ್ಸ್ ರವರು, ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶೀಮತಿ ಶಾಂತಿ ಮೇರಿ ಡಿಸೋಜಾರವರು, ಗಾರ್ಡಿಯನ್ ಏಂಜಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಹೆಲೆನ್ ಮೋನಿಕ ಲೋಬೊರವರು, ಶಿಕ್ಷಕ -ರಕ್ಷಕ ಸಂಘದ ಸದಸ್ಯೆಯಾದ ಶ್ರೀಮತಿ ಶ್ವೇತರವರು , ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಹಶಿಕ್ಷಕ ಜೆರಾಲ್ಡ್ ಡಿಸೋಜಾ ಮತ್ತು ಶಿಕ್ಷಕಿಯಾದ ಕುಮಾರಿ ರೀಮಾ ವೆರೋನರವರು ನಿರೂಪಿಸಿ, ಶಿಕ್ಷಕಿಯರಾದ ಶ್ರೀಮತಿ ತಸ್ರೀನರವರು ಸ್ವಾಗತಿಸಿ, ಶ್ರೀಮತಿ ಮಲ್ಲಿಕಾ ರವರು ಧನ್ಯವಾದವನ್ನು ಸಮರ್ಪಿಸಿದರು.

Related posts

ಜೆಸಿಐ ವಲಯ ಮಧ್ಯಂತರ ಸಮ್ಮೇಳನ – ಜೆಸಿಐ ಬೆಳ್ತಂಗಡಿ ಮಂಜುಶ್ರೀ ಚಾಂಪಿಯನ್

Suddi Udaya

ಅಳದಂಗಡಿಯಲ್ಲಿ “ಅಶ್ವಿ” ಅಲಂಕಾರ ಮಳಿಗೆ ಶುಭಾರಂಭ

Suddi Udaya

ಬಂಗಾಡಿ ಸಿ ಎ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಕೆ ಬಾಲಕೃಷ್ಣ ಗೌಡ ನಿಧನ

Suddi Udaya

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಉಜಿರೆ ಉದ್ಯಮಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ

Suddi Udaya

ಬೆಳ್ತಂಗಡಿ ಆನ್ ಸಿಲ್ಕ್ ಆಷಾಢ ಬಂಪರ್ ಸೇಲ್ ಕೆಲ ದಿನಗಳವರೆಗೆ ವಿಸ್ತರಣೆ: ಶೇ.50 ಖರೀದಿಗಾಗಿ ಜನರ ಬಾರಿ ಬೆಂಬಲ

Suddi Udaya
error: Content is protected !!