ಬೆಳ್ತಂಗಡಿ : ಶಾರದಾ ಕುಟುಂಬ ವಿಕಸನ ಮಂಡಳಿ, ಕೆ.ಸಿ.ಇ ಸಂಸ್ಥೆ ಪುತ್ತೂರು ಜಿಲ್ಲಾ ಮಾತೃ ಸಮನ್ವಯ ಸಮಿತಿ ದ. ಕ
ತಾಲೂಕು ಕಾರ್ಯ ನಿರ್ದೇಶಕರ ಸಂಯುಕ್ತ ಘಟಕ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸಂಚಾಲಕತ್ವದಲ್ಲಿ ಪ್ರಗತಿ ಮಹಿಳಾ ಮಂಡಲ ಉಜಿರೆ ಇದರ ಸಹಕಾರದೊಂದಿಗೆ ನನ್ನ ವಿದ್ಯೆ, ನನ್ನ ಪ್ರತಿಭೆ, ನನ್ನ ಸಾಧನೆ, ನನ್ನ ಹಕ್ಕು ಎಂಬ ದ್ಯೇಯ ವಾಕ್ಯದೊಂದಿಗೆ ಆಯೋಜಿಸಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರಾಥಮಿಕ ಯೋಜನೆಯ ವಿದ್ಯಾರ್ಥಿ ಪ್ರತಿಭಾ ಸದಸ್ಯರ ನೋಂದಣಿ ಅಭಿಯಾನ ಮತ್ತು ರಕ್ಷಾನಿಧಿ ಕಾರ್ಯಯಾನದ ಬೆಳ್ತಂಗಡಿ ತಾಲೂಕು ವಿಭಾಗೀಯ, ಉಜಿರೆ ಗ್ರಾಮ ವ್ಯಾಪ್ತಿ
ಉದ್ಘಾಟನೆ ಮತ್ತು ದೀಪಪ್ರಜ್ವಲನೆ ಕಾರ್ಯಕ್ರಮ ಡಿ. 01ರಂದು ಪ್ರಗತಿ ಮಹಿಳಾ ಮಂಡಲ ಉಜಿರೆ ಇಲ್ಲಿ ನಡೆಯಿತು.
ಮಾತೃ ಸಮನ್ವಯ ಸಮಿತಿ, ಶಾ.ಕು. ವಿ. ಮಂಡಳಿ ಇದರ ನಿರ್ದೇಶರಾದ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಹಾಗೂ ಪ್ರಗತಿ ಮಹಿಳಾ ಮಂಡಲ ಇದರ ಸದಸ್ಯರಾದ ಶ್ರೀಮತಿ ಚೇತನಾ ಉಜಿರೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾ.ಕು. ವಿ. ಮಂಡಳಿಯ ಸಾಂಸ್ಕೃತಿಕ ವಿಭಾಗ ನಿರ್ದೇಶಕರಾದ ಸುಧೀರ್ ಎಮ್. ಎಸ್ ಪ್ರಾಸ್ತವಿಕ ಮಾತನಾಡಿದರು.
ಮಂಡಳಿಯ ಕಾರ್ಯಾಲಯ ಪ್ರತಿನಿಧಿ ಕು. ನವ್ಯ ಮಂಡಳಿಯ ಕಾರ್ಯಯಾನ ಯೋಜನಾ ಮಾಹಿತಿ ಮಂಡಿಸಿದರು.
ನಂತರ ಮಂಡಳಿಯ ವಿದ್ಯಾರ್ಥಿ ಪ್ರತಿಭಾ ಸದಸ್ಯರು ‘ದೀಪಪ್ರಜ್ವಲನೆ’ ನಡೆಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಪ್ರಗತಿ ಮಹಿಳಾ ಮಂಡಲದ ಸದಸ್ಯರಾದ ಶ್ರೀಮತಿ ದಿವ್ಯ ಸೂರಜ್ ಹಾಗೂ ಶಾರದಾ ಕುಟುಂಬ ವಿಕಸನ ಮಂಡಳಿಯ ಲೆಕ್ಕ ಪರಿಶೋದಕಿ ಶ್ರೀಮತಿ ಸವಿತಾ ಹಾರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಸ್ವಾಗತಿಸಿ ವಂದಿಸಿದರು. ಶಮಂತ್. ಕೆ. ಸುಬ್ರಮಣ್ಯ ಸಹಕರಿಸಿದರು. ಮಂಡಳಿಯ ಮಾತೃ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.