ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಡಿ.02 ರಂದು ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ರಾತ್ರಿ ಮೃತದೇಹ ಹೊರತೆಗೆಯಲಾಗಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ ಸುಮಾರು 5ರಿಂದ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾಪತ್ತೆಯಾಗಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದು ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕದಳದವರು ರಾತ್ರಿ11ರ ಸುಮಾರಿಗೆ ಮೃತದೇಹ ಮೇಲೆತ್ತಿದ್ದಾರೆ.
ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು.ಇಂದು ( ಡಿ.03) 11 ಗಂಟೆಗೆ ಬೆಳಾಲು ಹಾಲು ಸೊಸೈಟಿ ಹತ್ತಿರದ ಮೈದಾನದಲ್ಲಿ ಪ್ರಸಾದ್ ಪಾರ್ಥಿವ ಶರೀರ ಇರಿಸಲಾಗಿದ್ದು ಸಾರ್ವಜನಿಕರ ದರ್ಶನಕ್ಕೆ ಮೂಲ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ ಪ್ರಸಾದ್ ಪಾರ್ಥಿವ ಶರೀರ ಸ್ಥಳಾಂತರಗೊಳ್ಳಲಿದ್ದು ಬೆಳಾಲು ಕೂಡಿಗೆ ಸ್ವ ಗೃಹಕ್ಕೆ ತರಲಾಗುವುದು .ನಂತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ.