September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಡಿ.14: ಮುಂಡೂರು ನಾಗಾಂಬಿಕಾ ಕ್ಷೇತ್ರದಲ್ಲಿ 40ಕ್ಕೂ ಮಿಕ್ಕಿ ಭಜನಾ ಮಂಡಳಿಗಳಿಂದ ಏಕಕಾಲದಲ್ಲಿ ಕಣಿತ ಭಜನೋತ್ಸವ

ಮುಂಡೂರು: ಶ್ರೀ ನಾಗಾಂಬಿಕಾ ದೇವಸ್ಥಾನ, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ಮುಂಡೂರು ಶ್ರೀ ನಾಗಾಂಬಿಕ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಗಳಗಿರಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇದರ ಸಹಯೋಗದೊಂದಿಗೆ ಡಿ.14ರಂದು ರಾತ್ರಿ ಗಂಟೆ 7ರಿಂದ ೮ರವರೆಗೆ ಮುಂಡೂರು ಮಂಗಳಗಿರಿ ಶ್ರೀ ಕ್ಷೇತ್ರದ ವಠಾರದಲ್ಲಿ ಬೆಳ್ತಂಗಡಿ ತಾಲೂಕಿನ ಸುಮಾರು 40ಕ್ಕೂ ಮಿಕ್ಕಿ ಭಜನಾ ಮಂಡಳಿಗಳ ಭಜಕರಿಂದ ಏಕಕಾಲದಲ್ಲಿ ‘ ಮಂಗಳಗಿರಿ ಕುಣಿತ ಭಜನೋತ್ಸವ’ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರಾದ ರಾಜೀವ್ ಅವರು ತಿಳಿಸಿದ್ದಾರೆ.

ಶ್ರೀ ನಾಗಾಂಬಿಕಾ ಕ್ಷೇತ್ರ ಮಂಗಳಗಿರಿಯಲ್ಲಿ 12 ವರ್ಷಗಳ ನಂತರ ನಡೆಯಲಿರುವ ದೇವಸ್ಥಾನದ ಹಾಗೂ ದೈವಗಳ ಗುಡಿಗೋಪುರಗಳ ನವೀಕರಣ ಹಾಗೂ ಬ್ರಹ್ಮಕಲಶೋತ್ಸದ ಪೂರ್ವಭಾವಿಯಾಗಿ ಅಗಲಿರುವ ಕೆಲಸ ಕಾರ್ಯಗಳು ಶೀಘ್ರವಾಗಿ ನೆರವೇರಲು ಹಾಗೂ ಗ್ರಾಮದ ಮತ್ತು ಭಕ್ತರ ಶ್ರೇಯೋಭಿವೃದ್ಧಿಗೋಸ್ಕರ ಶ್ರೀ ನಾಗಬಿಂಕ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಪೋಷಕರಿಂದ ದಿನಕ್ಕೆ ಒಬ್ಬರ ನೇತೃತ್ವದಲ್ಲಿ 48 ದಿನಗಳ ಭಜನಾ ಕಾರ್ಯಕ್ರಮವು ನಡೆಯುತ್ತಿದ್ದು, ಡಿ.11ರಂದು ಭಜನೆಯ ಮಂಗಳೋತ್ಸವ ಕುಣಿತ ಭಜನಾ ಕಾರ್ಯಕ್ರಮ ಹಾಗೂ ರಂಗ ಪೂಜೆ ಸೇವೆ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಭಕ್ತರು ಪೂರ್ಣ ಸಹಕಾರ ನೀಡುವಂತೆ ರಾಜೀವ್ ಅವರು ವಿನಂತಿಸಿಕೊಂಡಿದ್ದಾರೆ.

Related posts

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಇಚ್ಚುರಲ್ಲಿ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆಯ ಮೂರನೇ ಹಂತದ ಕಾರ್ಯಕ್ರಮ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾ ಕಲರವ ಉದ್ಘಾಟನೆ

Suddi Udaya

ಧರ್ಮಸ್ಥಳ ಅಶೋಕನಗರದಲ್ಲಿ77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!