25.4 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಿನ್ನರ ಮೇಳ ರಂಗ ತಂಡದಿಂದ ‘ ‘ಇರುವೆ ಪುರಾಣ ‘ ಮಕ್ಕಳ ನಾಟಕ ಪ್ರದರ್ಶನ

ಹೊಸಂಗಡಿ: ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಿನ್ನರ ಮೇಳ ತುಮರಿ ಕಲಾತಂಡದ ನೂತನ ಮಕ್ಕಳ ನಾಟಕ ‘ ‘ಇರುವೆ ಪುರಾಣ’ವು ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಇವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಪ್ರದರ್ಶನಗೊಂಡಿತು.

ಕಿನ್ನರ ಮೇಳ ರಂಗ ತಂಡವು ಪ್ರತಿ ವರ್ಷ ವಿನೂತನ ಕಥಾವಸ್ತುವನ್ನು ಒಳಗೊಂಡ ನಾಟಕಗಳನ್ನು ರಚಿಸಿ ಪ್ರದರ್ಶಿಸುತ್ತಿದೆ. ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ  ಮೌಲ್ಯಯುತ ಸಂದೇಶವನ್ನು ನೀಡುತ್ತಿದೆ. ‘ ಇರುವೆ ಪುರಾಣ ‘ ನಾಟಕವು ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವನ್ನು ನೀಡುವ ನೂತನ ಕಲಾಕುಸುಮವಾಗಿದೆ.


ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಮನರಂಜನೆ ಹಾಗೂ ಒಳ್ಳೆಯ ಸಂದೇಶವು ಈ ನಾಟಕದ ಮೂಲಕ ದೊರೆಯಿತು. ಶಾಲೆಯ ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ ನಾಟಕ ಪ್ರದರ್ಶನಕ್ಕೆ ಬೇಕಾದ ಸರ್ವ ರೀತಿಯ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಸಾವ್ಯ: ಮರದಿಂದ ಬಿದ್ದ ವ್ಯಕ್ತಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ತಾಲೂಕು ಆಡಳಿತ ಸೌಧದಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

Suddi Udaya

ಲಾಯಿಲ ಸೈಂಟ್ ಮೇರಿಸ್ ಶಾಲಾ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ, ಲೋಗೋ ಬಿಡುಗಡೆ

Suddi Udaya

ಕುಕ್ಕೇಡಿ ಉಳ್ತೂರು ಬಳಿಯ ಕಡ್ತ್ಯಾರ್ ಎಂಬಲ್ಲಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ದುರಂತದಲ್ಲಿ ಚಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟ ದೇಹಗಳು – ಮೂವರು ಸಾವು : ಹಲವರಿಗೆ ಗಂಭೀರ ಗಾಯ

Suddi Udaya

ಗುರಿಪಳ್ಳದಲ್ಲಿ ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

Suddi Udaya
error: Content is protected !!