25.3 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಭ್ರಮದ ವಾರ್ಷಿಕೋತ್ಸವ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಅನುಗ್ರಹ ಸಭಾಭವನದಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಂ|ಫಾ| ಅಬೆಲ್ ಲೋಬೊರವರ ಅಧ್ಯಕ್ಷತೆಯಲ್ಲಿ ಡಿ.3 ರಂದು ನಡೆಯಿತು.


ಅಭ್ಯಾಗತರನ್ನು ಶಾಲಾ ಬ್ಯಾಂಡಿನ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದಲ್ಲಿ ಆಡಿದ ಮಕ್ಕಳನ್ನು ಗೌರವಿಸಲಾಯಿತು. ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿಯಾದ ಸತ್ಯಾರ್ಥ ಜೈನ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.

ಇನ್ನೋರ್ವ ಮುಖ್ಯ ಅತಿಥಿ ಹಳೆಯ ಶಾಲೆ ವಿದ್ಯಾರ್ಥಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಶಾಲ್ಮಲಿ ಸುನಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನುಗ್ರಹ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾ ಜೀವನದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.

ಶಾಲಾ ಸಂಚಾಲಕರಾದ ವಂ| ಫಾ| ಅಬೆಲ್ ಲೋಬೊ ಅವರು ಅನುಗ್ರಹ ಸಂಸ್ಥೆಯ ಎಲ್ಲಾ ಶೈಕ್ಷಣಿಕ ಕ್ರಿಯಾಚಟುವಟಿಕೆಗಳಿಗೆ ಸಂತಸ ವ್ಯಕ್ತಪಡಿಸಿ ಇಲ್ಲಿಯ ಕಾರ್ಯಯೋಜನೆಗಳು ಇತರ ಶಾಲೆಗಳಿಗೂ ಮಾದರಿಯಾಗಲೆಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಪ್ರಾರ್ಥನೆಯ ಬಳಿಕ ಶಾಲಾ ನಾಯಕಿ ಗಾಯನ ಸ್ವಾಗತ ಭಾಷಣದ ಮೂಲಕ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲರಾದ ವಂ| ಫಾ| ವಿಜಯ್ ಲೋಬೊ ಅವರು ಶಾಲಾ ವರದಿಯನ್ನು ವಾಚಿಸಿದರು. ಆಯ್ದ ಬಹುಮಾನಗಳ ವಿತರಣೆಯನ್ನು ಮುಖ್ಯ ಅತಿಥಿಯಾದ ಡಾ. ಶಾಲ್ಮಲಿ ಸುನಿಲ್ ಮಾಡಿದರು. ಶ್ರೀಮತಿ ವಿನಯಲತಾ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿ ನಾಯಕ ಜೆರಿನ್ ಸಾಬಾಸ್ಟಿಯನ್ ಧನ್ಯವಾದವನ್ನು ಅರ್ಪಿಸಿದರು. ಅಪರಾಹ್ನ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts

ನಡ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪ್ರದೀಶ್ ಮರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

Suddi Udaya

ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ: ಶ್ರೀ ಮಂ. ಅ. ಪ್ರೌಢಶಾಲೆಯ ಶಿಕ್ಷಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya
error: Content is protected !!