April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆಯಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡು ಆರಂಭಗೊಂಡ ಹೋಟೇಲ್ ಮಥುರಾ ಉದ್ಘಾಟನೆ

ಗುರುವಾಯನಕೆರೆ: ಇಲ್ಲಿಯ ಬಂಟರಭವನದ ಬಳಿಯ ವರೇಣ್ಯಂ ಬಿಲ್ಡಿಂಗ್‌ನಲ್ಲಿ ಹವಾನಿಯಂತ್ರಿತ, ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡು ಆರಂಭಗೊಂಡ ಶುದ್ಧ ಸಸ್ಯಹಾರಿ “ಹೋಟೆಲ್ ಮಥುರಾ” ಇದರ ಉದ್ಘಾಟನಾ ಸಮಾರಂಭವು ಡಿ.4ರಂದು ಆದ್ದೂರಿಯಾಗಿ ಜರುಗಿತು.


ನೂತನ ಹೋಟೆಲ್‌ನ್ನು ಗುರುವಾಯನಕೆರೆಯ ಪ್ರಸಿದ್ಧ ವೈದ್ಯರಾದ ಡಾ| ವೇಣುಗೋಪಾಲ ಶರ್ಮ ಅವರು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಅವರ ಮಾತೃಶ್ರೀ ಶ್ರೀಮತಿ ನಳಿನಿ ಪೂಂಜ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಮ ಶೆಟ್ಟಿ ಭಾಗವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಟ್ಟಡದ ಮಾಲಕ ನಾರಾಯಣ ಉಪಾಧ್ಯಾಯ ಹೊನ್ನೊಟ್ಟು ಗುರುವಾಯನಕೆರೆ ಆಗಮಿಸಿ ಸಂಸ್ಥೆಗೆ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ರಾಜೇಶ್ ಶೆಟ್ಟಿ ನವಶಕ್ತಿ, ಆರ್.ಟಿ.ಒ ಚರಣ್ ಕುಮಾರ್, ಮೇಲಂತಬೆಟ್ಟು ಭಗವತಿ ಕ್ಷೇತ್ರದ ಧರ್ಮದರ್ಶಿ ಯೋಗೀಶ್ ಪೂಜಾರಿ, ಮಾಲಕ ವಸಂತ ಶೆಟ್ಟಿಯವರ ಸಹೋದರಾದ ಕೃಷ್ಣ ಶೆಟ್ಟಿ, ಸದಾಶಿವ ಶೆಟ್ಟಿ, ಸಹೋದರಿ ಶ್ರೀಮತಿ ಗುಲಾಬಿ, ಉದ್ಯಮಿ ಪ್ರಶಾಂತ್ ಕೋಟ್ಯಾನ್ ಬೆಳ್ತಂಗಡಿ, ಲಯನ್ಸ್ ಕಾರ್ಯದರ್ಶಿ ಕಿರಣ್ ಶೆಟ್ಟಿ, ನಾರಾಯಣ ಶೆಟ್ಟಿ ಹಾಗೂ ಗುರುವಾಯನಕೆರೆ ಮತ್ತು ಬೆಳ್ತಂಗಡಿ ಪೇಟೆಯ ವರ್ತಕರು, ಗಣ್ಯರು, ನಾಗರಿಕರು ಉಪಸ್ಥಿತರಿದ್ದರು.


ಆಗಮಿಸಿದ ಅತಿಥಿ-ಗಣ್ಯರನ್ನು ಹೋಟೆಲ್‌ನ ಮಾಲಕರಾದ ವಸಂತ ಶೆಟ್ಟಿ, ಶ್ರೀಮತಿ ವಿಮಲ, ಆಶ್ಲೇಷ ಶೆಟ್ಟಿ, ಕು| ಅಪೂರ್ವ ಅವರು ಸ್ವಾಗತಿಸಿ ಸತ್ಕಾರಿಸಿದರು.

Related posts

ಪಡಂಗಡಿ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ

Suddi Udaya

ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳಲಿರುವ ಬಂದಾರು ಕೆ ತೇಜಸ್ವಿನಿ ಪೂಜಾರಿ ರವರಿಗೆ ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಆರ್ಥಿಕ ನೆರವು

Suddi Udaya

ಕಲ್ಮಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಕುತ್ರೋಟ್ಟು ನಿವಾಸಿ ಫಯಾಜ್ ಸ್ಥಳೀಯ ಮಹಿಳೆ ಜೊತೆ ನಾಪತ್ತೆ ಶಂಕೆ: ಫಯಾಜ್ ನ ಪತ್ನಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು -ಪ್ರಕರಣ ದಾಖಲು

Suddi Udaya

ತೆಲುಗು ನಟ ಶ್ರೀಕಾಂತ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya

ಬೆಳ್ತಂಗಡಿ: ಜೈನ್‌ಪೇಟೆ ನಿವಾಸಿ ರಮೇಶ್ ಆಚಾರ್ಯ ನಿಧನ

Suddi Udaya
error: Content is protected !!