ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಹಕರ ಸಮಾಲೋಚನಾ ಸಭೆ ಡಿ.4ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ್ ರೈ ವಹಿಸಿದ್ದರು.
ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, 19 ವರ್ಷಗಳ ಹಿಂದೆ ಯಾವುದೇ ಕಾರ್ಯಚಟುವಟಿಕೆ ಇಲ್ಲದ ಬೆಳ್ತಂಗಡಿಯಲ್ಲಿ ಪ್ರಯೋಗದ ಮೂಲಕ ಪ್ರಾರಂಭವಾದ ಸಂಸ್ಥೆ ನಿರೀಕ್ಷೆಗೂ ಮೀರಿ ಬೆಳೆದು ನಿಂತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಶಿಧರ ಬಿ. ಶೆಟ್ಟಿ “ನವಶಕ್ತಿ” ಉದ್ಯಮಿಗಳು ಬರೋಡ, ಉಜಿರೆ ಎಸ್.ಡಿಎಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆ, ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಬಿ. ಉಪಸ್ಥಿತರಿದ್ದರು.
ಉಪಾಧ್ಯಕ್ಷ ಎಂ.ಜಿ. ಶೆಟ್ಟಿ, ನಿರ್ದೇಶಕರುಗಳಾದ ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಎಚ್., ಜಯಂತ ಶೆಟ್ಟಿ ಪುಷ್ಪರಾಜ್ ಶೆಟ್ಟಿ, ಬಿ. ನಾರಾಯಣ ಶೆಟ್ಟಿ, ಕೃಷ್ಣ ರೈ ಟಿ., ಕೆ. ಸದಾಶಿವ ಶೆಟ್ಟಿ, ಅಂಬಾ ಬಿ. ಆಳ್ವ, ರಾಜೇಶ್ ಶೆಟ್ಟಿ, ಪುರಂದರ ಶೆಟ್ಟಿ,
ಜಯರಾಮ ಭಂಡಾರಿ ಎಂ., ಮಂಜುನಾಥ ರೈ, ಸಾರಿಕಾ ಶೆಟ್ಟಿ, ಸೊಸೈಟಿಯ ಗ್ರಾಹಕರು ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರ್ದೇಶಕ ರಘುರಾಮ ಶೆಟ್ಟಿ ಎ. ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ
ಸುಜಯ್ ಶೆಟ್ಟಿ ವಂದಿಸಿದರು.