ಬೆಳ್ತಂಗಡಿ: ಶೃಂಗೇರಿ ಜಗದ್ಗುರು ಗಳ ಸನ್ನಿಧಿಯಲ್ಲಿ ನಡೆದ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕದ ಕಂಠಪಾಠ ಪರೀಕ್ಷೆ (ಗೀತಾ ಜ್ಞಾನ ಯಜ್ಞ )ಇದರಲ್ಲಿ ಕುಮಾರಿ ಅದ್ವಿತಿ ರಾವ್ ಪ್ರಥಮ ಶ್ರೇಣಿಯನ್ನು ಪಡೆದು ಶ್ರೀ ವಿಧುಶೇಖರ ಭಾರತೀ ಗುರುಗಳ ಆಶೀರ್ವಾದ ಪಡೆದಿದ್ದಾರೆ.
ಬೆಳ್ತಂಗಡಿ ಸುರ್ಯ ಪಡ್ಪು ಇಲ್ಲಿಯ ಅಶ್ವಥ್ ಮತ್ತು ಅಖಿಲ ದಂಪತಿಯ ಪುತ್ರಿ ಯಾಗಿದ್ದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇಲ್ಲಿಯ ಭಗವದ್ಗೀತೆ ಪಾಠ ಪಠಣ ತರಗತಿಯ ಆರಂಭದ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ ) ಉಜಿರೆ 6 ತರಗತಿಯ ವಿದ್ಯಾರ್ಥಿಯಾಗಿದ್ದಾರೆ.