ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ. ವೋಕ್ ವಿಭಾಗದ ವತಿಯಿಂದ, ಎಸ್‌ಡಿಎಂಇ ಸೊಸೈಟಿಯ ಮಾಜಿ ಕಾರ್ಯದರ್ಶಿ, ಕೀರ್ತಿಶೇಷ ಯಶೋವರ್ಮ ಅವರ ಜನ್ಮದಿನದ ಪ್ರಯುಕ್ತ, ಅವರ ನೆನಪಿನಲ್ಲಿ ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬಿ. ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ಉಪನ್ಯಾಸಕರಿಂದ, ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿಸಿ, “ಆರ್ಟ್ಸ್ & ಸ್ಕಿಲ್ಸ್” – ಕೌಶಲ್ಯದ ಕುರಿತಾದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.
ಬಿ. ವೋಕ್ ಇನ್ ರಿಟೇಲ್ & ಸಪ್ಲೈ ಚೇನ್ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ, ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ, “ಸಂತೋಷ ಮತ್ತು ಒತ್ತಡ ಮುಕ್ತ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗಗಳು” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಬಿ. ವೋಕ್ ಇನ್ ಸಾಫ್ಟ್‌ವೇರ್ & ಆ್ಯಪ್ ಡೆವಲಪ್ಮೆಂಟ್ ವಿಭಾಗದ ವತಿಯಿಂದ, ಎಸ್ಡಿಎಂ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ “ಐಟಿ ಉದ್ಯಮದಲ್ಲಿನ ಪ್ರಮುಖ ಕೌಶಲ್ಯಗಳು ಮತ್ತು ಪ್ರವೃತ್ತಿಗಳು” ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.
ಬಿವೋಕ್ ಸಂಯೋಜಕ ಸುವೀರ್ ಜೈನ್ ಉಪಸ್ಥಿತರಿದ್ದರು.