20.2 C
ಪುತ್ತೂರು, ಬೆಳ್ತಂಗಡಿ
December 18, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜ.8-12: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ : ಅರಸರಾದ ಡಾ. ಪದ್ಮಪ್ರಸಾದ್ ಅಜಿಲರ ನೇತೃತ್ವದಲ್ಲಿ ಪೂರ್ವಾಸಿದ್ದತಾ ಸಭೆ

ಅಳದಂಗಡಿ: ಇತಿಹಾಸ ಪ್ರಸಿದ್ದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವವು ಜ.೮-೧೨ ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಜಣೆಯಿಂದ ನಡೆಯಲಿದ್ದು ಆ ಪ್ರಯುಕ್ತ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯು ಅರಮನೆಯಲ್ಲಿ ಡಿ.೧ರಂದು ನಡೆಯಿತು.


ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಡಾ. ಪದ್ಮಪ್ರಸಾದ ಅಜಿಲರು ವಹಿಸಿ ೨೦೦೭ರಲ್ಲಿ ನಡೆದ ದೇವರ ಬ್ರಹ್ಮಕಲಶೋತ್ಸವವು ಅತ್ಯಂತ ಅದ್ಭುತವಾಗಿ ನಡೆದು ಅಜಿಲ ಸೀಮೆಯ ೩೨ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಈ ಸಲ ಮತ್ತೊಮ್ಮೆ ಎಲ್ಲರೂ ಸೇರುವಂತೆ ಪ್ರತಿ ಮನೆ ಮನೆಗೆ ಆಮಂತ್ರಣ ಹಂಚುವಂತ ಪ್ರಯತ್ನವಾಗಬೇಕು ಎಂದರು.


ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ ಸೋಮನಾಥೇಶ್ವರೀ ದೇಗುಲದ ಬ್ರಹ್ಮಕಲಶೋತ್ಸವ ಅತ್ಯಂತ ವೈಭವಪೂರ್ವಕವಾಗಿ ನಡೆಯಲು ನಾವೆಲ್ಲರೂ ಅಜಿಲ ಸೀಮೆಯ ೩೨ ಗ್ರಾಮಗಳಲ್ಲೂ ಬ್ಯಾನರ್ ಅಳವಡಿಸುವ ಮುಖೇನಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕೆಂದರು. ೧೭ ವರ್ಷಗಳ ಹಿಂದೆ ತೊಡಗಿಸಿದಂತೆ ಈ ಬಾರಿಯೂ ಒಟ್ಟು ಸೇರಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಶಕ್ತಿ ನೀಡೋಣ ಎಂದರು. ಪೂರ್ವಾಭಾವಿ ಸಭೆಯಲ್ಲಿ ಅಳದಂಗಡಿ ಸುಂಕದಕಟ್ಟೆ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್, ಪ್ರಮುಖರಾದ ಪ್ರವೀಣ್ ಕುಮಾರ್ ಇಂದ್ರ ವೇಣೂರು, ಕೃಷ್ಣಪ್ರಸಾದ್ ರೈ ಬೆಳ್ಳೂರುಗುತ್ತು, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು, ನವೀನ್ ಕೆ ಸಾಮಾನಿ ಕರಂಬಾರು,ನಾಗಕುಮಾರ್ ಪದ್ಮಾಂಭ,ಅಜಿತ್ ಕುಮಾರ್ ಜೈನ್,
ಕಿಶೋರ್ ಭಂಢಾರಿ ಬೆಳ್ಳೂರು, ಪ್ರಭಾಕರ ಪೂಜಾರಿ ಕೊಡಂಗೆ, ರತ್ನರಾಜ್ ಜೈನ್ ಪಿಲ್ಯ, ಸತೀಶ್ ಕೆ ಬಂಗೇರ ಕಾಶಿಪಟ್ಣ, ಜಯಂತ್ ಕೋಟ್ಯಾನ್ ಮರೋಡಿ, ಸದಾನಂದ ಪೂಜಾರಿ ಉಂಗಿಲಬೈಲು, ಸೋಮನಾಥ ಬಂಗೇರ ವರ್ಪಾಳೆ, ಡಾ| ಶಶಿಧರ ಡೋಂಗ್ರೆ ಸೇನರಬೈಲು, ಸುಭಾಶ್ಚಂದ್ರ ರೈ ಪಡ್ಯೋಡಿ, ಜಗನ್ನಾಥ ಶೆಟ್ಟಿ ಸಪ್ರಭಾತ, ರಾಜಶೇಖರ ಜೈನ್ ಅಳದಂಗಡಿ, ಸಂಜೀವ ಪೂಜಾರಿ ಕೊಡಂಗೆ, ಆರ್ಚಕ ಪ್ರಕಾಶ್ ಭಟ್, ಪ್ರಶಾಂತ್ ದೇವಾಡಿಗ ನಡಾಯಿ, ಜಗದೀಶ್ ಹೆಗ್ಡೆ ನಾವರಗುತ್ತು, ಡಾ. ಹರಿಪ್ರಸಾದ್ ಸುವರ್ಣ ಅಳದಂಗಡಿ, ಪ್ರಶಾಂತ್ ಶೆಟ್ಟಿ ಕರಂಬಾರು, ಡಾ| ಪ್ರತೀತ್ ಅಜಿಲ, ಡಾ| ಪ್ರೊಸ್ಟೀಲ್ ಅಜಿಲ, ಸುಪ್ರೀತ್ ಜೈನ್ ಹಾಗೂ ಗುರಿಕಾರರು, ಊರ ಪ್ರಮುಖರು ಉಪಸ್ಥಿತರಿದ್ದರು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಸ್ವಾಗತಿಸಿ, ವಂದಿಸಿದರು. ಪಿ.ಹೆಚ್. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ವಲಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಹಾವೇರಿ ರಾಣಿ ಬೆನ್ನೂರಿನಲ್ಲಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಟೀಮ್ ಸತ್ಯಜಿತ್‌ ಸುರತ್ಕಲ್ ತಂಡದಿಂದ ಬೃಹತ್ ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

Suddi Udaya

ಶ್ರೀ ರಾಮ ಕ್ಷೇತ್ರಕ್ಕೆ ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಅಧ್ಯಕ್ಷರಾಗಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಆಯ್ಕೆ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘದ ಹಿರಿಯ ಮಾಜಿ ನಿರ್ದೇಶಕರಿಗೆ ಸನ್ಮಾನ

Suddi Udaya
error: Content is protected !!