ಬಳಂಜ: ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ಡಿ.31 ರಂದು ಬಳಂಜ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ಪ್ರಧಾನ ಕಲಶಾಭಿಷೇಕ ನಡೆಯಲಿದ್ದು ಆ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಳಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕ ಮಂಜುನಾಥ್ ಭಟ್ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಬೈಲಬರಿ, ಪ್ರ. ಕಾರ್ಯದರ್ಶಿ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಬೋಂಟ್ರೊಟ್ಟುಗುತ್ತು ವ್ಯವಸ್ಥಾಪಕ ಗಣೇಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಟ್ರಸ್ಟ್ ಸದಸ್ಯರಾದ ರಮಾನಾಥ ಶೆಟ್ಟಿ ಪಂಬಾಜೆ, ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸದಾನಂದ ಪೂಜಾರಿ, ಆನಂದ ದೇವಾಡಿಗ, ಬಳಂಜ ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಶೆಟ್ಟಿ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಎಚ್. ದೇಜಪ್ಪ ಪೂಜಾರಿ, ಸಂದೇಶ್ ಪೂಜಾರಿ ಪೆರಾಜೆ, ಪ್ರವೀಣ್ ಗಾಂದೋಟ್ಟು, ಸದಾಶಿವ ಶೆಟ್ಟಿ ಬಳಂಜ ಹಾಗೂ ಇತರರು ಉಪಸ್ಥಿತರಿದ್ದರು.