20.2 C
ಪುತ್ತೂರು, ಬೆಳ್ತಂಗಡಿ
December 18, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಲೆಬೆಟ್ಟು ಹಾ.ಉ. ಸಂಘದ ಆಡಳಿತ ಮಂಡಳಿಯನ್ನುವಜಾಗೊಳಿಸಿ ನೀಡಿದ ಆದೇಶ ರದ್ದು: ಮತ್ತೆ ಅಧಿಕಾರದ ಗದ್ದುಗೆಗೆ ಏರಿದ ಪ್ರಮೋದ್ ಕುಮಾರ್ ಅಧ್ಯಕ್ಷತೆಯ ಆಡಳಿತ ಮಂಡಳಿ

ಕೊಯ್ಯೂರು: ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮೂವರು ನಿರ್ದೇಶಕರ ನಡುವೆ ಉಂಟಾದ ವಿವಾದದಲ್ಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ನೀಡಿದ, ಆದೇಶವನ್ನು ದ.ಕ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದಾಗಿ ಈ ಹಿಂದಿನ ಆಡಳಿತ ಮಂಡಳಿ ಮತ್ತೆ ಸಂಘದ ಅಧಿಕಾರದ ಗದ್ದುಗೆಗೆ ಏರಿದೆ.

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪ್ರಮೋದ್ ಕುಮಾರ್ ಅಧ್ಯಕ್ಷರು, ಗಂಗಯ್ಯ ಗೌಡ ಉಪಾಧ್ಯಕ್ಷರು, ನಿರ್ದೇಶಕರುಗಳಾಗಿ ದಾಮೋದರ ಗೌಡ, ಜಯಂತ ಗೌಡ, ಪ್ರವೀಣ್ ಪೂಜಾರಿ, ಅಣ್ಣಿ ಪೂಜಾರಿ, ಸಂಜೀವ ಎಂ.ಕೆ, ಚಿತ್ರಾ ಕಟ್ಟ, ಸೇಸಪ್ಪ ಎಂ.ಕೆ ಮತ್ತು ಉದಯ ಕುಮಾರ್, ಪುಷ್ಪರಾಜ ಜೈನ್ ಮತ್ತು ಶ್ರೀಮತಿ ಲಕ್ಷ್ಮೀ ಕಾರ್ಯನಿರ್ವಹಿಸುತ್ತಿದ್ದರು.
ಈ ನಡುವೆ ಅಧ್ಯಕ್ಷ ಪ್ರಮೋದ್ ಕುಮಾರ್ ಅವರ ಆಡಳಿತ ವೈಖರಿ ಬಗ್ಗೆ ನಿರ್ದೇಶಕರುಗಳಾದ ಉದಯ ಕುಮಾರ್, ಪುಷ್ಪರಾಜ್ ಹಾಗೂ ಲಕ್ಷ್ಮೀಯವರು ಅಸಮಾಧಾನ ವ್ಯಕ್ತಪಡಿಸಿ, ವಿವಿಧ ಆರೋಪಗಳನ್ನು ಮಾಡಿದ್ದರಿಂದ ಸಂಘದಲ್ಲಿ ಅಧ್ಯಕ್ಷ ನಿರ್ದೇಶಕರುಗಳ ನಡುವೆ ಜಟಾಪಟಿಗೆ ಕಾರಣವಾಯಿತು. ಅಧ್ಯಕ್ಷರ ಪರ ಹಾಗೂ ವಿರೋಧದ ಸಂಘದ ಸದಸ್ಯರ ಗುಂಪುಗಳು ನಿರ್ಮಾಣವಾಗಿ ವಿವಾದ ಇನ್ನಷ್ಟು ಜಟಿಲತೆಗೆ ತಲುಪಿತು. ಅಲ್ಲದೆ ಸಂಘದ ಕಾರ್ಯದರ್ಶಿಯು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಆಡಳಿತ ಮಂಡಳಿ ಸಭೆ ನಡೆಸಲು ಸಾಧ್ಯವಾಗದೆ ಹಾಲು ಶೇಖರಣೆ ಮತ್ತು ಹಣ ಬಡವಾಡೆಗೆ ವ್ಯತ್ಯಯ ಉಂಟಾಯಿತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಮೂವರು ನಿರ್ದೇಶಕರು ಸಲ್ಲಿಸಿದ ವಿವಾದ ಪುತ್ತೂರು ವಿಭಾಗದ ಸಹಾಯಕ ನಿಬಂಧಕರ ನ್ಯಾಯಾಲಯಕ್ಕೆ ತಲುಪಿ ಅಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮೋದ್ ಕುಮಾರ್ ಅಧ್ಯಕ್ಷರಾಗಿದ್ದ ಮಲೆಬೆಟ್ಟು ಹಾಲು ಉತ್ಪಾದಕರ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಆದೇಶ ನೀಡಿತ್ತು.


ಆಡಳಿತ ಮಂಡಳಿ ವಜಾಗೊಂಡಿದ್ದರಿಂದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮನವಿಯಂತೆ ಸಂಘದಲ್ಲಿ ಹಾಲು ಸಂಗ್ರಹಣೆ, ಹಣ ಬಡವಾಡೆ ಸೇರಿದಂತೆ ವ್ಯವಹಾರ ಸಮರ್ಪಕವಾಗಿ ಮುಂದುವರಿಯಲು ಆಡಳಿತ ಮಂಡಳಿ ಸ್ಥಾನದಲ್ಲಿ ವಿಶೇಷ ಅಧಿಕಾರಿಯನ್ನಾಗಿ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀಮತಿ ಯಮುನಾ ಅವರನ್ನು ನೇಮಿಸಲಾಗಿತ್ತು. ಪುತ್ತೂರು ವಿಭಾಗದ ಸಹಾಯಕ ನಿಬಂಧಕರ ನ್ಯಾಯಾಲಯ ಆಡಳಿತ ಮಂಡಳಿಯನ್ನು ವಿಸರ್ಜಿಸಿ ನೀಡಿದ ಆದೇಶದ ವಿರುದ್ಧ ಅಧ್ಯಕ್ಷ ಪ್ರಮೋದ್ ಕುಮಾರ್ ಅವರು ದ.ಕ ಜಿಲ್ಲಾ ಸಹಾರ ಸಂಘಗಳ ಉಪನಿಬಂಧಕರ ನ್ಯಾಯಾಲಯಕ್ಕೆ ಮೇಲ್ಮನವಿ (ಸಂಖ್ಯೆ: ೦೧/೨೦೨೪-೨೫) ಸಲ್ಲಿಸಿ, ಆಡಳಿತ ಮಂಡಳಿಯನ್ನು ವಿಸರ್ಜಿಸಿದ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಈ ವಿವಾದದ ಬಗ್ಗೆ ವಿಚಾರಣೆ ನಡೆಸಿದ ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ, ಇದೀಗ ಪುತ್ತೂರು ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ನೀಡಿದ ಆದೇಶವನ್ನು (ಸಂಖ್ಯೆ: ಎಆರ್೩೭/ಆರ್‌ಎಸ್‌ಆರ್/೧೧೮/೨೦೨೩-೨೪) ರದ್ದುಗೊಳಿಸಿದ್ದಾರೆ.

ಇದರಿಂದಾಗಿ ಪ್ರಮೋದ್ ಕುಮಾರ್ ಅವರ ನೇತೃತ್ವದ ಆಡಳಿತ ಮಂಡಳಿಗೆ ಮತ್ತೆ ಅಧಿಕಾರ ದೊರಕಿದ್ದು, ವಿಶೇಷಾಧಿಕಾರಿಯವರು ಈಗಾಗಲೇ ಅಧಿಕಾರವನ್ನು ಅಧ್ಯಕ್ಷ ಪ್ರಮೋದ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಸತ್ಯ ಪ್ರಾಮಾಣಿಕತೆಗೆ ಸಂದ ಜಯ
ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ನೀಡಿದ ತೀರ್ಪನ್ನು ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ರದ್ದುಗೊಳಿಸಿ ಆದೇಶ ನೀಡಿರುವುದು ಸತ್ಯ, ಪ್ರಾಮಾಣಿಕತೆಗೆ ಸಂದ ಜಯವಾಗಿದೆ. ತಮ್ಮ ಮೇಲೆ ಸುಳ್ಳು ಆರೋಪ ಮಾಡಿದಂತಹ ನಿರ್ದೇಶಕರುಗಳಾದ ಪುಷ್ಪರಾಜ ಜೈನ್, ಉದಯ ಕುಮಾರ್ ಜೈನ್, ಲಕ್ಷ್ಮೀ ಹಾಗೂ ಸಂಘದ ಸದಸ್ಯ ನಾರಾಯಣ ಭಟ್ ಇವರ ಮೇಲೆ ಆಧಾರ ಸಮೇತ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟುನಲ್ಲಿ ಸಲ್ಲಿಸುತ್ತೇವೆ.
– ಪ್ರಮೋದ್ ಕುಮಾರ್ ಅಧ್ಯಕ್ಷರು

Related posts

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ಚಾರ್ಮಾಡಿ: ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ  ಕೃಷಿ ನಾಶ

Suddi Udaya

ವ್ಯಾಪಕ ಮಳೆ: ಜು.9 ದ.ಕ. ಜಿಲ್ಲಾದ್ಯಂತ ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಕುವೆಟ್ಟು: ನೂರಲ್ ಹುದಾ‌ ಜುಮಾ ಮಸೀದಿ ಮದ್ದಡ್ಕ ವತಿಯಿಂದ ಮಾದಕ ದ್ರವ್ಯ‌ ಮುಕ್ತ‌ ಜನಜಾಗೃತಿ ಜಾಥಾ

Suddi Udaya

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಅರಣ್ಯ ಸಚಿವರಿಗೆ ಮನವಿ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

Suddi Udaya
error: Content is protected !!