25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶುದ್ಧ ನೀರು ಬಳಕೆಯಿಂದ ಆರೋಗ್ಯ ರಕ್ಷಣೆ: ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ

ಧರ್ಮಸ್ಥಳ: ನೀರು ಅತೀ ಅಮೂಲ್ಯವಾದ ಸಂಪತ್ತಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಲು ಪ್ರಕೃತಿಯು ನೀಡಿದ ಕೊಡುಗೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರು ಡಿ.4 ರಂದು ರಾಜ್ಯಾದ್ಯಂತ ಶುದ್ಧಗಂಗಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತಿಳಿಸಿರುತ್ತಾರೆ.



ಮಾನವ ಆಹಾರ ಇಲ್ಲದೇ 10 ದಿನವಾದರೂ ಬದುಕಬಹುದು. ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ನೀರು ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಅಶುದ್ಧ ನೀರನ್ನು ಕುಡಿಯುವುದರಿಂದ ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳು ಹಾಗೂ ಜನ ಸಾಮಾನ್ಯರ ಮೇಲೆ ಆಗುತ್ತಿರುವ ಅನಾರೋಗ್ಯ ಸಮಸ್ಯೆಯನ್ನು ಮನಗಂಡು ಎಲ್ಲಿ ನೋವಿದೆಯೋ ಅಲ್ಲಿ ಔಷಧಿ ನೀಡಬೇಕೆಂದು ಶುದ್ಧ ನೀರಿನ ಸಮಸ್ಯೆ ಇರುವಲ್ಲಿ ಯೋಜನೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಈ ಶುದ್ಧಗಂಗಾ ಘಟಕಗಳ ಶುದ್ಧ ನೀರನ್ನು ಬಳಸುವುದರಿಂದ ಅದೆಷ್ಟೋ ಜನರ ಆರೋಗ್ಯ ರಕ್ಷಣೆಯಾಗಿದೆ. ಮನೆಯಲ್ಲಿ ನೀರಿನ ವ್ಯವಸ್ಥೆಯ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರಿಗೆ ಇದೆ. ಇಂದು ಶುದ್ಧ ನೀರು ಬಳಕೆಯಿಂದ ಮಹಿಳೆ ತನ್ನ ಹಾಗೂ ತನ್ನ ಕುಟುಂಬದ ಆರೋಗ್ಯ ರಕ್ಷಿಸಿಕೊಳ್ಳುತ್ತಿದ್ದಾರೆ. ಶುದ್ಧ ನೀರಿನ ಬಳಕೆಯಿಂದ ಆಗಿರುವ ಬದಲಾವಣೆಯ ಬಗ್ಗೆ ಇನ್ನಷ್ಟು ಜನರಿಗೆ ಮಾಹಿತಿ ನೀಡಿ ಅವರಲ್ಲಿ ಇಚ್ಛ್ಟಾ ಶಕ್ತಿ ಮೂಡಿಸಿ ನಿರಂತರ ಶುದ್ಧನೀರಿನ ಬಳಕೆ ಮಾಡುವಂತೆ ಎಲ್ಲಾ ಮೇಲ್ವಿಚಾರಕರು ಪ್ರಯತ್ನಿಸಿ ಜನಮನ ತಲುಪಿದರೆ ಅದು ಪುಣ್ಯದ ಕೆಲಸ. ಪ್ರತೀ ವರ್ಷಕ್ಕೊಮ್ಮೆ ಗ್ರಾಹಕರ ಸಭೆ ನಡೆಸಿ ಅವರಿಗೆ ಶುದ್ಧ ನೀರಿನ ಬಳಕೆಯಿಂದಾದ ಪ್ರಯೋಜನವನ್ನು ತಿಳಿಸಬೇಕು. ಘಟಕಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ನಿರಂತರ ಜನರಿಗೆ ಸೇವೆಯನ್ನು ನೀಡಬೇಕು. ಎಂದು ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ .ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಸಮುದಾಯ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಜನಪರ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ್ದು, ಅವುಗಳಲ್ಲಿ ಶುದ್ಧಗಂಗಾ ಕಾರ್ಯಕ್ರಮವೂ ಒಂದು. ಜನ ಸಾಮಾನ್ಯರು ಶುದ್ಧನೀರನ್ನು ಬಳಸಿ ಖಾಯಿಲೆಯಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊಂಡ ಶುದ್ಧಗಂಗಾ ಕಾರ್ಯಕ್ರಮದಲ್ಲಿ ಶುದ್ಧ ನೀರಿನ ಸಮಸ್ಯೆ ಇರುವ ರಾಜ್ಯದ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 476 ಶುದ್ಧಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತೀನಿತ್ಯ 5.91 ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.

ಈ ಸಂದರ್ಭದಲ್ಲಿ ಯೋಜನೆಯ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ಕುಮಾರ್ ಎಸ್.ಎಸ್, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ವಿಭಾಗದ ನಿರ್ದೇಶಕರಾದ ಶಿವಾನಂದ ಆಚಾರ್ಯ, ಯೋಜನಾಧಿಕಾರಿಗಳಾದ ಯುವರಾಜ್ ಜೈನ್, ಫಕ್ಕೀರಪ್ಪ ಬೆಲ್ಲಾಮುದ್ದಿ ಉಪಸ್ಥಿತರಿದ್ದರು.

Related posts

ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ನಿರ್ಮಾಣ ಹಂತದಲ್ಲಿರುವ ಗುಂಡೇರಿ ಲಯನ್ಸ್ ಬಸ್ ತಂಗುದಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಪ್ರತ್ಯಕ್ಷ: ಮೂರ್ತಿಗೆ ಹೂ ಹಾಕಿ, ಪ್ರಾರ್ಥಿಸಿ ಹೋದ ಅನಾಮಿಕ,

Suddi Udaya

ಹೊಸಪಟ್ಣ ದೊಡ್ಯಾರು ಮನೆಯ ಶ್ರೀಮತಿ ಸುಂದರಿ ನಿಧನ

Suddi Udaya

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಜಿನ ಭಜನಾ ಪುಸ್ತಕ ಬಿಡುಗಡೆ ಮತ್ತು ಪರಮ ಪೂಜ್ಯ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರ ವಿನಯಾಂಜಲಿ ಸಭೆ,

Suddi Udaya

ನಾವೂರು ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಪುರಿಯ ಹಾಲಿನ ಸೊಸೈಟಿ ನೂತನ ಕಟ್ಟಡದ ಅನುದಾನಕ್ಕಾಗಿ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!