29.7 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ; “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

ತುಲು ಕಥೆ ಬರಹಗಾರರಿಗೆ ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ನಿಮ್ಮ ಸ್ವಂತ ಕಥೆಗೆ “ಕುದ್ಕ ಬಚ್ಚಿರೆ” ಎಂಬ ವೇದಿಕೆಯನ್ನು ಸಿದ್ದಪಡಿಸಿ ತುಲು ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಮೂರು ಉತ್ತಮ ಕಥೆಗಳಿಗೆ 3,000ರೂ.ಗಳಂತೆ ಮತ್ತು 7 ಮೆಚ್ಚಿದ ಕಥೆಗಳಿಗೆ 1,500ರೂ. ಗಳಂತೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಆಯ್ದ ಕತೆಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಜ.31ರ ಒಳಗಾಗಿ 800 ಪದಗಳ ಮಿತಿಯಲ್ಲಿ ತುಲು ಭಾಷೆಯಲ್ಲಿ ಸ್ವಂತ ಕಥೆ ಬರೆದು [email protected]ಗೆ ಇ-ಮೇಲ್ ಅಥವಾ 9900634405 ನಂಬರಿಗೆ ಪಿಡಿಎಫ್ ಅಥವಾ ವರ್ಡ್ ಫಾರ್ಮ್ಯಾಟ್ ನಲ್ಲಿ ವಾಟ್ಸಾಪ್ ಮೂಲಕ ಕಳುಹಿಸಬಹುದು

ಕೈ ಬರಹದ ಮೂಲಕ ಕತೆ ಬರೆಯುವವರು 2 A4 ಹಾಳೆ ಪುಟದಲ್ಲಿ ಕತೆ ಬರೆದು “ಆರ್ ಪ್ರದೀಪ್, ತಿರ್ತಗುತ್ತು ಗರ್ಡಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, 574217” ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬಹುದು.

ಕಥೆ ಬರೆದವರ ಹೆಸರು, ವಿಳಾಸ, ವಯಸ್ಸು ಮತ್ತು ಕಥೆಯ ತಲೆಬರಹವನ್ನು ಪೋಸ್ಟ್ ಮೂಲಕ ಕಳಿಸುವವರು ಬೇರೆ ಒಂದು ಹಾಳೆಯಲ್ಲಿ ಹಾಗೂ ವಾಟ್ಸಾಪ್, ಮೇಲ್ ಮಾಡುವವರು ಬೇರೆ ಪುಟದಲ್ಲಿ ಕಳಿಸಬೇಕು.

ನಿಮ್ಮದೇ ಸ್ವಂತ ವಿಷಯದ ಆಧಾರದ ಮೇಲೆ ಕತೆ ಬರೆಯಬಹುದು. ಆದರೆ 14 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ಆಯೋಜಕರ ಸೋಷಿಯಲ್ ಮೀಡಿಯಾವನ್ನು ಫಾಲೋ ಮಾಡಬಹುದು ಅಥವಾ 9900634405, 8762686433 ಈ ನಂಬರಿಗೆ ಕರೆಮಾಡಬಹುದು.

Related posts

ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಉದ್ಘಾಟನೆ

Suddi Udaya

ಗೆಳೆಯರ ಬಳಗ ಗುರುವಾಯನಕೆರೆ: 33ನೇ ವರ್ಷದ ಶ್ರೀ ಶಾರಾದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ: ಬಿರ್ವ ಸಂಜೀವ ಪೂಜಾರಿಯವರಿಂದ ನವರಾತ್ರಿ ಮಹೋತ್ಸವ ಉದ್ಘಾಟನೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಬೆಂಬಲ

Suddi Udaya

ತಾಲೂಕು ಮಟ್ಟದ ಕಂಠಪಾಠ ಸ್ಪರ್ಧೆ: ಕುಕ್ಕೇಡಿ ಬುಳೆಕ್ಕರ ಶಾಲೆಯ ವಿದ್ಯಾರ್ಥಿ ಪ್ರಥ್ವಿ ವಿ ಎಸ್ ಪ್ರಥಮ ಸ್ಥಾನ

Suddi Udaya
error: Content is protected !!